

ಮದ್ದೂರು: ಭಗವದ್ಗೀತೆಯ ಅಂಶಗಳು ಇಂದಿಗೂ ಸರ್ವಕಾಲಿಕವಾದದ್ದು. ವಿದ್ಯಾರ್ಥಿಗಳು ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆಯತ್ತ ಮುಖ ಮಾಡಬೇಕೆಂದು ಪುರಸಭೆ ಸದಸ್ಯೆ ಬಿ.ಸಿ. ಸರ್ವಮಂಗಳಾ ತಿಳಿಸಿದರು.
ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮ, ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಧರ್ಮ ಕಾಲದ ಯುಗದಲ್ಲಿ ನಾವುಗಳು ನ್ಯಾಯದ ಪರವಾಗಿ ಇದ್ದು, ಶ್ರೀಕೃಷ್ಣನ ಸಂದೇಶಗಳಿರುವ ಭಗವದ್ಗೀತೆಯ ಬಗ್ಗೆ ಹೆಚ್ಚಿನ ಮಹತ್ವವನ್ನು ತಿಳಿದುಕೊಂಡು ಸನ್ಮಾರ್ಗದತ್ತ ಹೆಜ್ಜೆ ಹಾಕಬೇಕೆಂದರು.
ಶ್ರಾವಣ ಮಾಸದಲ್ಲಿ ಶ್ರೀಕೃಷ್ಣನ ಹುಟ್ಟಿದ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದ್ದು ವಿಷ್ಣು ಶ್ರಾವಣ ಮಾಸದಲ್ಲಿ ಶ್ರೀ ಕೃಷ್ಣನಾಗಿ ಎಂಟನೇ ಅವತಾರವಾಗಿ ಮಹಾಭಾರತದಲ್ಲಿ ಶ್ರೀ ಕೃಷ್ಣ ಯುದ್ಧವನ್ನು ಗೆಲ್ಲಲು ಪಾಂಡವರಿಗೆ ಸಹಾಯ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದರು.
ಆಯುರ್ವೇದ ವೈದ್ಯೆ ಡಾ.ಕವಿತಾ ಮಾತನಾಡಿ, ಶ್ರೀ ವಿಷ್ಣುವಿನ ಎಂಟನೇ ಅವತಾರದಲ್ಲಿ ಶ್ರೀ ಕೃಷ್ಣನಾಗಿ ಜನಿಸಿದ್ದು ವಾಸುದೇವ ಮತ್ತು ದೇವಕಿಯ ಎಂಟನೇ ಮಗನಾಗಿ ಜನಿಸುತ್ತಾನೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಅಧರ್ಮದಿಂದ ಧರ್ಮದತ್ತ ಸಾಗುವ ಮೂಲಕ ತಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು ಕೃಷ್ಣ-ರಾಧೆ ವೇಷಭೂಷಣ ತೊಟ್ಟು ನೋಡುಗರ ಗಮನ ಸೆಳೆದರಲ್ಲದೆ ತರಗತಿವಾರು ಮಕ್ಕಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ವೈದ್ಯರಾದ ಉಮಾ, ಮುಖ್ಯಶಿಕ್ಷಕಿ ಪಾವನಾ, ಕಲ್ಪಿತಾ ಸಂತೋಷ್‌ಗೌಡ, ಶಿಕ್ಷಕರು ಸಿಬ್ಬಂದಿ ಹಾಜರಿದ್ದರು.