ವಿದ್ಯುನ್ಮಾನ ಮತಯಂತ್ರದ ಜಾಗೃತಿ ಅಭಿಯಾನ

KOTTUR EVM Awerness
ಕೊಟ್ಟೂರು ತಾಲೂಕು ಹ್ಯಾಳ್ಯಾ ಗ್ರಾಮದಲ್ಲಿ ಬುಧವಾರ ವಿದ್ಯುನ್ಮಾನ ಮತಯಂತ್ರಗಳ ಕುರಿತು ಅರಿವು ಮೂಡಿಸಲಾಯಿತು. ಸೆಕ್ಟರ್ ಅಧಿಕಾರಿ ಎ.ಕೆ.ವೀರಣ್ಣ, ಪಿಡಿಒ ಗಂಗಾಧರ ಸ್ವಾಮಿ, ನಿಂಗಪ್ಪ ಇತರರಿದ್ದರು.
Published on

ಕೊಟ್ಟೂರು: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿ ಮತಚಲಾಯಿಸಿದ್ದನ್ನು ವಿವಿ ಪ್ಯಾಟ್ ಮೂಲಕ ನೋಡಿ ಖಾತ್ರಿಪಡಿಸಿಕೊಳ್ಳಬಹು ಎಂದು ಸೆಕ್ಟರ್ ಅಧಿಕಾರಿ ಹಾಗೂ ಎಪಿಎಂಸಿ ಕಾರ್ಯದರ್ಶಿ ಎ.ಕೆ.ವೀರಣ್ಣ ಹೇಳಿದರು.

ಹ್ಯಾಳ್ಯಾ ಗ್ರಾಮದಲ್ಲಿ ಬುಧವಾರ ಇವಿಎಂಗಳ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇವಿಎಂನಲ್ಲಿ ಚಲಾಯಿಸಿದ ಮತ ಬದಲಾವಣೆಯಾವುದಿಲ್ಲ. ಯಾವ ಚಿಹ್ನೆಗೆ ವೋಟ್ ಹಾಕಿರುತ್ತೀರಿ ಆ ಚಿಹ್ನೆಗೆ ಮಾತ್ರ ಮತ ಬಿದ್ದಿರುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಪಿಡಿಒ ಗಂಗಾಧರ ಸ್ವಾಮಿ, ಬಿಎಲ್‌ಒ ಪ್ರಕಾಶ, ಸಾರ್ವಜನಿಕ ಗ್ರಂಥಾಲಯ ಮೇಲ್ವಿಚಾರಕ ಲೋಕೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net