ಪಟ್ರಮೆಯಲ್ಲಿ ವಿದ್ಯುದಾಘಾತಕ್ಕೆ ತಾಯಿ ಮಗು ಬಲಿ

Electric-Shock
Published on

ಬೆಳ್ತಂಗಡಿ: ಪಂಪ್‌ ಸ್ವಿಚ್‌ ಹಾಕಲು ಹೋದ ತಾಯಿ ಮತ್ತು ಮಗು ವಿದ್ಯುತ್‌ ಆಘಾತದಿಂದ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಭಾನುವಾರ ಬೆಳಗ್ಗೆ ಧರ್ಮಸ್ಥಳ ಸಮೀಪದ ಪಟ್ರಮೆಯಲ್ಲಿ ನಡೆದಿದೆ.
ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಪಂಪ್‌ನ ಸ್ವಿಚ್‌ ಹಾಕಲು ಪಂಪ್‌ಶೆಡ್‌ನೊಳಗೆ ಬಂದಿದ್ದ ಹರೀಶ್‌ ಗೌಡ ಅವರ ಪತ್ನಿ ಗೀತಾ(30) ಮತ್ತು ನಾಲ್ಕು ವರ್ಷದ ಪುತ್ರ ಭವಿಷ್‌ ಮೃತಪಟ್ಟಿದ್ದಾರೆ.
ದನಗಳಿಗೆ ನೀರು ಕೊಡಲೆಂದು ಮೋಟಾರ್‌ ಹಾಕಲು ತೆರಳಿದ್ದುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net