ಮಿಂಚಿನ ನೋಂದಣಿ ಪ್ರಯೋಜನ ಪಡೆಯಿರಿ

7telsang1-Web
ತೆಲಸಂಗ ಗ್ರಾಮದಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನದ ಜಾಗೃತಿ ಜಾಥಾಕ್ಕೆ ಗ್ರಾಮ ಲೆಕ್ಕಾಧಿಕಾರಿ ಪಿ.ಡಿ. ಬಡಿಗೇರ ಚಾಲನೆ ನೀಡಿದರು. ಗ್ರಾಪಂ ಕಾರ್ಯದರ್ಶಿ ರವೀಂದ್ರ ಹಿರೇಮಠ, ಮುಖ್ಯ ಶಿಕ್ಷಕ ಬಿ.ಎಚ್. ಶೆಲ್ಲೆಪ್ಪಗೋಳ, ಮಾದೇವ ಕಂದಾರೆ, ಸಂಗಮೇಶ ಕುಮಠಳ್ಳಿ ಇತರರು ಇದ್ದರು.
Published on

ತೆಲಸಂಗ: ಯಾವುದೇ ದೇಶದ ಮಹತ್ತರ ಬದಲಾವಣೆಯ ಹಿಂದೆ ಯುವಕರ ಪಾತ್ರ ಮಹತ್ವದ್ದಾಗಿರುವುದನ್ನು ಇತಿಹಾಸದಿಂದ ತಿಳಿದಿದ್ದೇವೆ. ದೇಶ ಕಟ್ಟುವ ಯುವ ಶಕ್ತಿಗಳಿಗೆ ಮತದಾನದ ಅವಕಾಶ ಕಲ್ಪಿಸುವ ಉದ್ದೇಶದಿಂದ ಮಿಂಚಿನ ನೋಂದಣಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಯುವ ಮತದಾರರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ಪಿ.ಡಿ. ಬಡಿಗೇರ ಹೇಳಿದ್ದಾರೆ.

ಗ್ರಾಮದಲ್ಲಿ ಮಂಗಳವಾರ ಮತದಾರರ ಮಿಂಚಿನ ನೋಂದಣಿ ಅಭಿಯಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ- 6, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7, ಹೆಸರು ತಿದ್ದುಪಡಿಗಾಗಿ ನಮೂನೆ 8, ಒಂದು ಪಟ್ಟಿಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆಗೆ ನಮೂನೆ 8ರಲ್ಲಿ ಭರ್ತಿ ಮಾಡಿ, ಅಥಣಿ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು ಎಂದರು. ಗ್ರಾಪಂ ಕಾರ್ಯದರ್ಶಿ ರವೀಂದ್ರ ಹಿರೇಮಠ, ಮುಖ್ಯ ಶಿಕ್ಷಕ ಬಿ.ಎಚ್. ಶೆಲ್ಲೆಪ್ಪಗೋಳ, ಮಾದೇವ ಕಂದಾರೆ, ಸಂಗಮೇಶ ಕುಮಠಳ್ಳಿ, ಸಿದ್ದಪ್ಪ ಹಡಪದ, ಡಿ.ಎಸ್. ರಾಠೋಡ, ಎ.ಜೆ. ಕೋಳಿ, ಎ.ಕೆ. ಕಾಂಬಳೆ, ಮಲಕಪ್ಪ ಕೊಟ್ಟಲಗಿ, ಈಶ್ವರ ಉಂಡೋಡಿ, ಮಲ್ಲು ಸವಣೂರ, ಹುಸೇನ ಅರಟಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net