ವಿದ್ಯುತ್ ತಂತಿ ತಗುಲಿ ತಂದೆ-ಮಗ ಸಾವು

01
Published on

ಶಿರಗುಪ್ಪಿ: ಹೊಲದಲ್ಲಿರುವ ಒಣ ಮೇವು ಟ್ರಾೃಕ್ಟರ್‌ನಲ್ಲಿ ತುಂಬಿಕೊಂಡು ಬರುವಾಗ ವಿದ್ಯುತ್ ತಂತಿ ತಗುಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ರೈತ ಹಾಗೂ ಆತನ ಮಗ ಮೃತಪಟ್ಟ ಘಟನೆ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ರೈತ ಭರತ ರಾಮು ಬೋರಗಾಂವೆ (45) ಹಾಗೂ ಮಗ ಪ್ರೇಮ ಭರತ ಬೋರಗಾಂವೆ (18) ಮೃತಪಟ್ಟ ದುರ್ದೈವಿಗಳು. ಭಾನುವಾರ ಬೆಳಗ್ಗೆ 8.30ಕ್ಕೆ ತಮ್ಮ ತೋಟದಲ್ಲಿದ್ದ ಒಣ ಮೇವನ್ನು ಟ್ರಾೃಕ್ಟರ್ ಟೇಲರ್‌ನಲ್ಲಿ ತುಂಬಿಕೊಂಡು ಬರುವಾಗ ವಿದ್ಯುತ್ ತಂತಿ ಸ್ಪರ್ಶಿಸಿ, ಬೆಂಕಿ ಆವರಿಸಿದೆ.

ಗಾಯಗೊಂಡ ತಂದೆ-ಮಗನನ್ನು ಕೂಡಲೇ ಚಿಕಿತ್ಸಗೆಗಾಗಿ ಚಿಕ್ಕೋಡಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಭರತ ಬೋರಗಾಂವೆ ಅವರಿಗೆ ತಂದೆ, ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net