ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

Crime Logo
Published on

ಹಿರೇಕೆರೂರ: ಕ್ಯಾಂಟರ್ ವಾಹನದ ಮೇಲೆ ನಿಂತು ಕಬ್ಬಿಣದ ಪೈಪ್ ತೆಗೆಯುತ್ತಿದ್ದ ವ್ಯಕ್ತಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಮಾಸೂರ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂಕಿನ ಕುಬಕಟ್ಟಿ ಗ್ರಾಮದ ಸಂತೋಷ ಬಸಪ್ಪ ಸಿಂದೆ (35) ಮೃತ ವ್ಯಕ್ತಿ.
ಈತ ಮಾಸೂರ ಗ್ರಾಮದ ಬಳಿ ಜಮೀನುವೊಂದರಲ್ಲಿ ಕ್ಯಾಂಟರ್ ಮೇಲೆ ನಿಂತು ಕಬ್ಬಿಣದ ಪೈಪ್ ತೆಗೆಯುತ್ತಿದ್ದ. ಈ ಸಮಯದಲ್ಲಿ ಕ್ಯಾಂಟರ್ ವಾಹನ ನಿಲ್ಲಿಸಿದ ಜಾಗದ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net