

ರಾಯಚೂರು ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ ಪರಿಷ್ಕರಣೆ ಮಾಡಲು ಹೊರಟಿರುವದನ್ನು ವಿರೋಧಿಸಿ ಅ.26 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ದಕ್ಷಿಣ ಭಾರತ ವಿದ್ಯುತ್ ಬಳಕೆದಾರರ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ವೇಣುಗೋಪಾಲ್ ಭಟ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀರಣ, ಸ್ಮಾರ್ಟ್ ಮೀಟರ್ ಅಳವಡಿಕೆ ಮುಂದಾಗಿದೆ. ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿತರುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಕೈಗೆ ವಿದ್ಯುತ್ ನೀಡುವಹುನ್ನಾರಗಳು ಪ್ರಾರಂಭವಾಗಿವೆ.
ಈಗಾಗಲೇ ದೆಹಲಿ ಮತ್ತು ಬಾಂಬೆಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಪೂರೈಕೆ ಮಾಡುತ್ತಿವೆ. ಜೀವನಾಶ್ಯಕತೆಗಳಲ್ಲಿ ಒಂದಾಗಿರುವ ವಿದ್ಯುತ್‌ನ್ನು ಮೇಲಿಂದ ಮೇಲೆ ದರಗಳನ್ನು ಹೆಚ್ಚಿಸಿ ಬಳಕೆದಾರರಿಗೆ ತೊಂದರೆ ನೀಡಲಾಗುತ್ತಿದೆ. ಅದಾನಿ, ಅಂಬಾನಿ, ಟೋರೆಂಟೊ ಸೇರಿದಂತೆ ಅನೇಕ ಕಂಪನಿಗಳ ಕೈಗೆ ವಿದ್ಯುತ್ ನಿರ್ವಹಣೆಯನ್ನು ನೀಡಲಾಗುತ್ತಿದೆ. 2022 ರಲ್ಲಿ ಎನ್‌ಡಿಎ ಸರ್ಕಾರ ವಿದ್ಯುಚ್ಚಕ್ತಿ ಮಸೂದೆ ಸಂಸತ್‌ನಲ್ಲಿ ಮಂಡಿಸಿ ಜಾರಿಗೆ ಹೊರಟಿತ್ತು. ಜನರ ತೀವ್ರ ವಿರೋಧದಿಂದ ಸದನ ಸಮಿತಿಗೆ ವಹಿಸಲಾಗಿದೆ. ರೈತರು, ಜನರು ನಿರಂತರ ಹೋರಾಟ ಫಲವಾಗಿ ಇನ್ನೂ ಜಾರಿಗೊಂಡಿಲ್ಲ. ನೌಕರರ ಸಂಖ್ಯೆಯನ್ನು ಇಳಿಸಿ ಖಾಸಗಿಯವರಿಗೆ ನೀಡುವ ಪ್ರಯತ್ನಗಳು ಮುಂದುವರೆಯುತ್ತಿವೆಮದು ಆರೋಪಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಹೋರಾಟ ಬಲಗೊಳಿಸಲು ನಡೆಯಲಿರುವ ಸಮಾವೇಶದಲ್ಲಿ ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಹಾಗೂ ವಿವಿಧ ಜಿಲ್ಲೆಗಳಿಂದಲೂ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಸಮಾವೇಶವನ್ನು ರಾಷ್ಟ್ರೀಯ ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಸ್ವಪನ್ ಘೋಷ ಉದ್ಘಾಟಿಸಲಿದ್ದಾರೆ. ಅತಿಥಿ ಭಾಷಣಕಾರರಾಗಿ ಹರಿಯಾಣದ ಮಾಜಿ ಐಎಎಸ್ ದೇವ ಸಹಾಯಂ, ಆಂಧ್ರಪ್ರದೇಶದ ಸಂಯುಕ್ತ ಕೃಷಿ ಮೋರ್ಚಾದ ವಡ್ಡೆ ಸೋಭನಾದ್ರಿಶ್ವರ, ತಮಿಳುನಾಡಿನ ಎಐಇಸಿಎ ಅಧ್ಯಕ್ಷ ಎಸ್.ಗಾಂಧಿ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಣ್ಣಪ್ಪ ಶಿರಶ್ಯಾಡ್, ಪಾಂಡುರಂಗ ಇದ್ದರು.