

ಮುದಗಲ್: ಮೊಹರಂ ನಿಮಿತ್ತ ಪಟ್ಟಣದ ಕೋಟೆ ಮುಂಭಾಗದ ಚೌಡಿಕಟ್ಟೆ ಹತ್ತಿರ ಹಾಕಿದ್ದ ಗೋಬಿ ಮಂಚೂರಿ ಅಂಗಡಿಯಲ್ಲಿ ಗುರುವಾರ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಂದೀಪ್ ಸಿಂಗ್ ಮಂಗಲಸಿಂಗ್ ಗುಂತಕಲ್ (36) ಎಂದು ಗುರುತಿಸಲಾಗಿದೆ. ಕಳೆದ 17 ವರ್ಷಗಳಿಂದ ಮೊಹರಂ ಹಬ್ಬದ ಸಂದರ್ಭದಲ್ಲಿ ಗೋಬಿ ಮಂಚೂರಿ ವ್ಯಾಪಾರ ಮಾಡಲು ಮುದಗಲ್‌ಗೆ ಆಗಮಿಸುತ್ತಿದ್ದರು.
ಅದರಂತೆ ಈ ವರ್ಷವೂ ಬಂದಿದ್ದು, ಗುರುವಾರ ಮುಖ್ಯ ವಿದ್ಯುತ್ ಲೈನ್‌ಗೆ ವೈರ್ ಹಾಕುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಗೇರಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.