ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ಬ್ಯಾಡಗಿ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕೆಂಗೊಂಡ ಗ್ರಾಮದ ಬಳಿ ಸೋಮವಾರ ನಡೆದಿದೆ.
ಗ್ರಾಮದ ಪ್ರಕಾಶ ಗುಡ್ಡಪ್ಪ ಕುರಿ (39) ಮೃತ ವ್ಯಕ್ತಿ.
ಇವರು ತಮ್ಮ ಜಮೀನಿಗೆ ತೆರಳುತ್ತಿದ್ದ ಸಮಯದಲ್ಲಿ ಕೆಂಗೊಂಡ ಕೆರೆ ಹತ್ತಿರ ಗ್ರಾಪಂ ಬೋರ್‌ವೆಲ್‌ಗೆ ಹಾಕಿದ್ದ ವಿದ್ಯುತ್ ಕೇಬಲ್‌ನ ತಂತಿ ಮೇಲೆ ಕಾಲಿಟ್ಟಿದ್ದರಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net