ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ

Published on

ಹುಬ್ಬಳ್ಳಿ: ವಿದ್ಯುತ್ ಅವಘಡಗಳು ಹಾಗೂ ಅವುಗಳಿಂದಾಗುವ ಪ್ರಾಣ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಹೆಸ್ಕಾಂ ವ್ಯಾಪ್ತಿಯ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವಿಭಾಗ ವ್ಯಾಪ್ತಿಯ ವಿವಿಧೆಡೆ ಮಂಗಳವಾರ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ನಡೆಯಿತು.

ಗ್ರಾಮೀಣ ವಿಭಾಗ, ಅಣ್ಣಿಗೇರಿಯ ಅಕೌಂಟ್ ಸೆಕ್ಷನ್, ಗ್ರಾಮೀಣ ಹಾಗೂ ನಗರ ವಿಭಾಗ, ನವಲಗುಂದ ಗ್ರಾಮೀಣ, ನಗರ ವಿಭಾಗ, ಅಂಚಟಗೇರಿ, ಬ್ಯಾಹಟ್ಟಿ, ನೂಲ್ವಿ, ಶಿರಗುಪ್ಪಿ ಹಾಗೂ ಕುಂದಗೋಳ ಉಪವಿಭಾಗ, ಹುಬ್ಬಳ್ಳಿಯ ಕೇಶ್ವಾಪುರ, ಕಾರವಾರ ರಸ್ತೆಯಲ್ಲಿರುವ ಸಿದ್ದಾರೂಢ ಹೈಸ್ಕೂಲ್.

ಸತ್ತೂರು, ಗೋಪನಕೊಪ್ಪ, ಚಾಣಕ್ಯಪುರಿ, ಇಂಡಿ ಪಂಪ್ ದರ್ಗಾ, ಮಂಟೂರು ರಸ್ತೆ ವಿಭಾಗದ ಗಣೇಶಪೇಟೆಯ ಕರೆಮ್ಮಾ ದೇವಸ್ಥಾನ, ಬಂಕಾಪುರ ಚೌಕ್ ವಿಭಾಗದಡಿ ರೈತ ಸಂಘ ಕಚೇರಿ, ಇಂಡಸ್ಟ್ರೀಯಲ್ ಎಸ್ಟೇಟ್, ನವನಗರ, ಉಣಕಲ್, ತಾರಿಹಾಳ ಕಚೇರಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ವೇಳೆ ಪವರ್ ಮೆನ್ ಗಳು, ಸಿಬ್ಬಂದಿ, ಸಾರ್ವಜನಿಕರಿಗೆ ವಿದ್ಯುತ್ ದುರಸ್ತಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಬಳಸಬೇಕಾದ ಸುರಕ್ಷತಾ ಸಲಕರಣೆಗಳ ಕುರಿತು ಅರಿವು ಮೂಡಿಸಲಾಯಿತು.

ವಿದ್ಯುತ್ ಸಂಬಂಧಿತ ಕಾರ್ಯನಿರ್ವಹಣೆ ವೇಳೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣ ಹಾನಿಯಾಗುವ ಸಂಭವ ಇರುತ್ತದೆ. ಜನಸಾಮಾನ್ಯರಲ್ಲೂ ಈ ಕುರಿತು ಅರಿವಿನ ಕೊರತೆ ಇರವುದರಿಂದ ವಿದ್ಯುತ್ ಅವಘಡಗಳ ಸಂಖ್ಯೆ ಹೆಚ್ಚುತ್ತವೆ. ಇವುಗಳನ್ನು ತಡೆಯುವ ಉದ್ದೇಶದಿಂದ ವಿದ್ಯುತ್ ಸುರಕ್ಷತೆಯ ಜಾಗೃತಿ ಎಲ್ಲರಿಗೂ ಅವಶ್ಯ ಎಂದು ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net