ನಿರಂತರ ವಿದ್ಯುತ್‌ ಕಡಿತದಿಂದ ಜನಜೀವನ ಅಸ್ತವ್ಯಸ್ತ ELECTRICITY

ಬಿಜೆಪಿ ಪ್ರತಿಭಟನೆ ಎಚ್ಚರಿಕೆ
ಬಿಜೆಪಿ ಪ್ರತಿಭಟನೆ ಎಚ್ಚರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿ ಪ್ರತಿಭಟನೆ ಎಚ್ಚರಿಕೆ
ಪುತ್ತೂರು: ಎರಡು ದಿನಗಳಿಂದ ನಿರಂತರ ವಿದ್ಯುತ್‌ ವ್ಯತ್ಯಯವಾಗಿ ಪುತ್ತೂರು ಕಗ್ಗತ್ತಲಿನಲ್ಲಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದರು.
ಎರಡು ದಿನಗಳಿಂದ ನಿರಂತರ ವಿದ್ಯುತ್‌ ಸಮಸ್ಯೆಯಿಂದ ವ್ಯಾಪಾರಿಗಳು, ಸಾರ್ವಜನಿಕರು, ಬ್ಯಾಂಕ್‌, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸೇರಿ ವಿವಿಧ ಸೇವೆಗಳಲ್ಲಿ ತೀವ್ರ ಸಂಕಷ್ಟ ಎದುರಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್‌ ಇಲಾಖೆಗೆ ದೂರು: ವಿಟ್ಲ ಭಾಗದಲ್ಲೂ ಕಳೆದ ಶನಿವಾರದಿಂದ ಸಮರ್ಪಕವಾಗಿ ವಿದ್ಯುತ್‌ ಇಲ್ಲದೆ ವ್ಯಾಪಾರಸ್ಥರು ಶೀಥಲೀಕರಣ ವ್ಯವಸ್ಥೆಯಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ಮೆಸ್ಕಾಂನ ವಿವಿಧ ಸ್ತರದ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರದ ವಿದ್ಯುತ್‌ ಇಲಾಖೆಯ ಅಡಿಷನಲ್‌ ಸೆಕ್ರೆಟರಿ ಕಚೇರಿಗೆ ಕರೆ ಮಾಡಿ ವ್ಯಾಪಾರಸ್ಥರು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ವಿಟ್ಲದಲ್ಲಿ ತುರ್ತು ಸಭೆ

ನಿರಂತರ ದೂರುಗಳ ಹಿನ್ನೆಲೆಯಲ್ಲಿ ಮೆಸ್ಕಾಂ ಬಂಟ್ವಾಳ ಕಾರ್ಯನಿರ್ವಹಣೆ ಇಂಜಿನಿಯರ್‌ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಗಿದೆ. ಹಲವು ಬಾರಿ ವಿದ್ಯುತ್‌ ಕಡಿತದಿಂದ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಲು ಸೂಚಿಸಲಾಗಿದೆ. ಕೆಲವು ಭಾಗದಲ್ಲಿ ಮಂಗಳವಾರದಿಂದಲೇ ಮರಗಳ ಗೆಲ್ಲು ತೆರವು ಕಾರ್ಯ ಭರದಿಂದ ಸಾಗಿದೆ. ಮೂರು ದಿನಗಳ ಕಾಲಾವಕಾಶ ಕೋರಿರುವ ಇಲಾಖೆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net