ವಿದ್ಯುತ್ ತಗುಲಿ ಬುಗುರಿ ಆಟವಾಡುತ್ತಿದ್ದ ಬಾಲಕ ಸಾವು

Child Death 16 Jan 20
Published on

ಖಾನಾಪುರ: ಮನೆಯಲ್ಲಿ ಬುಗುರಿ ಆಟವಾಡುತ್ತಿದ್ದ ಬಾಲಕನಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಗ್ರಾಮದ ರಿಹಾನ್ ಮಹಮ್ಮದಗೌಸ್ ಫರಾಸ್ (8) ಮೃತ ಬಾಲಕ. ರಿಹಾನ್ ಮನೆಯ ಪಡಸಾಲೆಯಲ್ಲಿ ಬುಗುರಿ ಆಡುತ್ತಿದ್ದ.

ಬುಗುರಿ ತಿರುಗುತ್ತ ಮೂಲೆಯಲ್ಲಿದ್ದ ರೆಫ್ರಿಜರೇಟರ್ ಅಡಿಗೆ ಹೋಗಿದೆ. ಬುಗುರಿಯನ್ನು ಹೊರತೆಗೆಯಲು ರಿಹಾನ್ ರೆಫ್ರಿಜರೇಟರ್ ಕೆಳಗೆ ಕೈ ಹಾಕಿದಾಗ ವಿದ್ಯುತ್ ತಗುಲಿದೆ. ಶಾಕ್‌ನಿಂದ ಚೀರಾಟ ನಡೆಸಿದ ರಿಹಾನ್‌ನನ್ನು ರಕ್ಷಿಸಲು ಹೋದ ಆತನ ತಂದೆಗೂ ವಿದ್ಯುತ್ ತಗುಲಿದ್ದರಿಂದ ಅವರೂ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಬಾಲಕ ರಿಹಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net