ವಿದ್ಯುತ್ ದೀಪ- ಹೂಗಳಿಂದ ಅಲಂಕಾರ

25 SANDOOR 02
ಸಂಡೂರಿನ ಕ್ರಿಸ್ತಜ್ಯೋತಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಫಾದರ್ ಮಾರ್ಟಿನ್ ಹಾಗೂ ಫಾದರ್ ವಸಂತಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Published on

ಸಂಡೂರು: ಯೇಸುಕ್ರಿಸ್ತ 2023 ವರ್ಷಗಳ ಹಿಂದೆ ಜನಿಸಿ ಜಗತ್ತಿನಲ್ಲಿ ಶಾಂತಿ, ಸಹನೆ, ಏಕತೆ ಸ್ಥಾಪನೆಗೆ ಶ್ರಮಿಸಿದರು ಎಂದು ಫಾದರ್ ಮಾರ್ಟಿನ್ ಹಾಗೂ ಫಾ.ವಸಂತಕುಮಾರ್ ಹೇಳಿದರು.

ಕ್ರಿಸ್‌ಮಸ್ ಅಂಗವಾಗಿ ಕ್ರಿಸ್ತಜ್ಯೋತಿ ಚರ್ಚ್‌ನಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಜನರ ಒಳಿತಿಗಾಗಿ ಶ್ರಮಿಸಿದ ಅವರ ಜೀವನ ಹಾಗೂ ತತ್ವಗಳು ನಮಗೆಲ್ಲ ಆದರ್ಶ. ಯೇಸುಕ್ರಿಸ್ತರ ಮಾರ್ಗದಲ್ಲಿ ಸಾಗುವ ಮೂಲಕ ಸಮೃದ್ಧಿ ನೆಲೆಸಲು ಶ್ರಮಿಸೋಣ ಎಂದು ಕ್ರಿಸ್‌ಮಸ್ ಸಂದೇಶ ನೀಡಿದರು.

ಚರ್ಚ್‌ನ್ನು ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಯೇಸುಕ್ರಿಸ್ತ ಜನಿಸಿದ ಗೋದಲಿಯನ್ನು ನಿರ್ಮಿಸಲಾಗಿತ್ತು. ಮುಖಂಡರಾದ ಯು.ರೂಪಾ ಲಾಡ್, ಕೃಪಾನಿಲ ಕಾನ್ವೆಂಟಿನ ಸಿಸ್ಟರ್‌ಗಳಾದ ರೀಟಾ, ಸಿಸಿಲಿ ಫೆಲಿಕ್ಸ್, ಅಂಥೋನಿ ಮೇರಿ, ದೀಪ್ತಿ ಥಾಮಸ್, ಲೆನ್ಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net