ಒಂದೂವರೆ ಲಕ್ಷ ಸದಸ್ಯತ್ವ ನೋಂದಣಿ ಗುರಿ

IMG_20220922_11222888
Published on

ಚಿತ್ರದುರ್ಗ:ಜನರಿಗೆ ಉಚಿತ ವಿದ್ಯುತ್,ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವುದು ನಮ್ಮ ಪಾರ್ಟಿಯ ಮುಖ್ಯ ಉದ್ದೇಶವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಗುರುವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪಕ್ಷದ ಸದಸ್ಯ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.

ಹೊಸದಿಲ್ಲಿ ಮುಖ್ಯಮಂತ್ರಿ ಕ್ರೇಜಿವಾಲ್‌ರವರು ಜನತೆಗೆ ಉಚಿತವಾಗಿ ವಿದ್ಯುತ್,ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಿದ್ದಾರೆ. ಪಕ್ಷದ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲೂ ಇದೇ ಮಾದರಿ ಅನುಷ್ಠಾನಗೊಳ್ಳಲಿದೆ. ಆದ್ದರಿಂದ ರಾಜ್ಯದ ಮತದಾರರ ಸಹಕಾರ ಅಗತ್ಯವಿದೆ. ಜಿಲ್ಲೆ ಯಲ್ಲಿ 1.50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಇದೆ ಎಂದರು.

ಸಮಾವೇಶ

2023 ಜನವರಿ ಚಿತ್ರದುರ್ಗದಲ್ಲಿ ಏರ್ಪಡಿಸಲಾಗುವ ಪಕ್ಷದ ಸಮಾವೇಶದಲ್ಲಿ ಮುಖ್ಯಮಂತ್ರಿ ಕ್ರೇಜಿವಾಲ್ ಸೇರಿದಂದ ಪಕ್ಷದ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದರು. ಫಾರೂಕ್ ಅಬ್ದುಲ್,ಲಕ್ಷ್ಮೀನಾರಾಯಣ,ಜಿ.ಮನೋಹರ್,ಶಶಿಧರ್,ನವೀನ್,ನವಾಜ್, ರಾಜಣ್ಣ,ಇಬ್ರಾಹಿಂ,ವೇದಮೂರ್ತಿ,ಬಿ.ಅಹಮ್ಮದ್,ಗುರುಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net