ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪತ್ತಿ ಯಶಸ್ವಿ, ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್‌ನ ವಿಜಯಕುಮಾರ ಹೆಗ್ಡೆ ಹೇಳಿಕೆ

power new
Published on

ಗಂಗೊಳ್ಳಿ: ಹಿಂದೆ ಮಲ್ಪೆ ಮತ್ತು ಕೆಮ್ಮಣ್ಣಿನ ಕಡಲತೀರಗಳಲ್ಲಿ ಸಮುದ್ರ ಅಲೆಗಳ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲು ಪ್ರಾಯೋಗಿಕ ನೆಲೆಯಲ್ಲಿ ಸ್ಥಾಪಿಸಿದ ಘಟಕಗಳು ಯಶಸ್ವಿಯಾಗಿವೆ. ಮರವಂತೆ ತೀರ ಈ ಉದ್ದೇಶಕ್ಕೆ ಹೆಚ್ಚು ಪ್ರಶಸ್ತ ಎಂದು ಅಧ್ಯಯನದಿಂದ ದೃಢಪಟ್ಟಿರುವುದರಿಂದ ಇಲ್ಲಿ ದೊಡ್ಡಮಟ್ಟದ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಶಿವಳ್ಳಿಯ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್‌ನ ವಿಜಯಕುಮಾರ ಹೆಗ್ಡೆ ಹೇಳಿದರು.

ಮರವಂತೆಯ ಉದ್ದೇಶಿತ ಘಟಕ ನಿರ್ಮಾಣವಾಗುವ ಮರವಂತೆಯ ಮಾರಸ್ವಾಮಿ ಕಡಲತೀರದಲ್ಲಿ ಶುಕ್ರವಾರ ಯೋಜನೆಯ ಭೂಮಿಪೂಜೆ ನೆರವೇರಿಸಿದ ಬಳಿಕ ಅದರ ವಿವರ ನೀಡಿ ಮಾತನಾಡಿದರು.

ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಈ ಉದ್ದೇಶಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ ಅಲ್ಲಿನ ತೀರ ಅಷ್ಟು ಅನುಕೂಲಕರ ಅಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮರವಂತೆಯಲ್ಲಿ ಸದ್ಯ 10 ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಿ, ಅರ್ಹತಾ ದೃಢೀಕರಣ ಪಡೆದ ಬಳಿಕ ಅದನ್ನು ಮೇಲ್ದರ್ಜೆಗೇರಿಸಲಾಗುವುದು. ಪ್ರಧಾನಿ ಈಗಲೂ ಈ ವಿಚಾರದಲ್ಲಿ ಉತ್ಸುಕರಾಗಿದ್ದು, ಈ ತಿಂಗಳ 22 ಮತ್ತು 23ರಂದು ಅವರೊಂದಿಗೆ ಸಭೆ ನಡೆಯಲಿದೆ. ಕೇಂದ್ರದ ಹಸಿರು ನಿಶಾನೆ ದೊರೆತರೆ ಮರವಂತೆಯಲ್ಲಿ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net