ವಿದ್ಯುತ್ ವ್ಯತ್ಯಯ ಇಂದು

New Power Cut
Published on

ಹುಬ್ಬಳ್ಳಿ : ಇಲ್ಲಿನ ಗೋಪನಕೊಪ್ಪ ಹಾಗೂ ಕುಸುಗಲ್ಲ ರಸ್ತೆಯ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಿರುವುದರಿಂದ ನ. 7ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹೊಸುರ್, ಕ್ಲಬ್ ರಸ್ತೆ, ಮಹಾನಗರ ಪಾಲಿಕೆ ಕಚೇರಿ, ಹಳೇ ಬಸ್ ನಿಲ್ದಾಣದ ಎದುರುಗಡೆ, ಏಕತಾ ನಗರ, ಸಾಯಿನಗರ, ಗೋಪನಕೊಪ್ಪ, ಸಿಲ್ವರ್ ಪಾರ್ಕ್, ದೇವಾಂಗ ಪೇಟೆ, ಬಾಲಾಜಿ ನಗರ, ಮಯೂರ ಎಸ್ಟೇಟ್, ಸೂರ್ಯ ನಗರ, ಸನ್ ಸಿಟಿ, ರಮೇಶ ಭವನ ರಸ್ತೆ, ಸುಳ್ಳ ರಸ್ತೆ, ಸವೋದಯ ಸರ್ಕಲ್, ರಾಜಾಜಿ ನಗರ, ನೃಪತುಂಗ ಬೆಟ್ಟ, ವಿಶ್ವೇಶ್ವರ ನಗರ, ವಿದ್ಯಾನಗರ, ಎಂ.ವಿ.ಪಿ ಕಾಲೇಜು, ಶಬರಿ ನಗರ, ಮಧುರಾ ಕಾಲನಿ, ಮಧುರ ಎಸ್ಟೇಟ್, ಅರಿಹಂತ ನಗರ, ವಿನಯ ಕಾಲನಿ, ಕುಸುಗಲ್ ಗ್ರಾಮ, ಹೆಬಸೂರ ಗ್ರಾಮ, ಕಿರೇಸೂರ ಗ್ರಾಮ, ಬ್ಯಾಹಟ್ಟಿ ಗ್ರಾಮ, ಸುಳ್ಳ ಗ್ರಾಮ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net