

ಹೊಸಪೇಟೆ:ಜೆಸ್ಕಾಂ ಹೊಸಪೇಟೆ ನಗರ ಮತ್ತು ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ನಗರದ ಡ್ಯಾಂ ರಸ್ತೆಯಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದೆ.
ಬೆಳಗ್ಗೆ ೧೧ ಗಂಟೆಗೆ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಗ್ರಾಹಕರ ಸಭೆ ನಡೆಯಲಿದ್ದು, ವಿವಿಧ ಗ್ರಾಮಗಳ ಗ್ರಾಹಕರು ಸಭೆಯಲ್ಲಿ ಪಾಲ್ಗೊಳ್ಳಬಹುದು.
ನಂತರ ೧೧.೩೦ಕ್ಕೆ ನಗರ ಉಪವಿಭಾಗ-೧ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ. ಬಸವೇಶ್ವರ ಬಡಾವಣೆ, ಇಂಡಸ್ಟಿçÃಯಲ್ ಏರಿಯಾ, ಅಮರಾವತಿ, ಸಾಯಿರಾಂ ಬಡಾವಣೆ, ಮಲ್ಲಿನಾಥ್ ಲೇಔಟ್, ಚಿತ್ತವಾಡ್ಗಿ, ಕಲ್ಯಾಣ ನಗರ, ಪಟೇಲ್ ನಗರ, ಅನ್ನಪೂರ್ಣ ಬಡಾವಣೆ, ಕಾಲೇಜು ರಸ್ತೆ, ಇಂದಿರಾ ನಗರ, ಚಾಪಲಗಟ್ಟ, ಸ್ಟೇಷನ್ ರಸ್ತೆ, ಪಟೇಲ್ ನಗರ, ರೈಲ್ವೆ ನಿಲ್ದಾಣ, ಶ್ರೀರಾಮುಲು ಪಾರ್ಕ್, ರಾಯಲ್ ಆರ್ಕೇಡ್, ಚಲುವಾದಿ ಕೇರಿ, ಜಬ್ಬಲ್ ವೃತ್ತ, ನೆಹರೂ ಕಾಲೊನಿ, ಚಪ್ಪರದಹಳ್ಳಿ, ಎಸ್‌ಆರ್ ನಗರ, ಎಂಜೆ ನಗರ, ಗಾಂಧಿ ಕಾಲೊನಿ, ಬಿಟಿಆರ್ ನಗರ, ವಿದ್ಯಾ ನಗರ, ಭಗತ್ ಸಿಂಗ್ ನಗರ, ಸಂಡೂರು ರಸ್ತೆ, ವಿದ್ಯಾರಣ್ಯ ನಗರ, ವಿವೇಕಾನಂದ ನಗರ, ಜೋಳದರಾಶಿ ಗುಡ್ಡ, ಸಾಯಿಬಾಬಾ ಸರ್ಕಲ್, ಗೋಕುಲ ನಗರ, ಸೋನಿಯಾ ನಗರ, ಇಂದಿರಾ ನಗರ, ವಂಕಾಯ ಕ್ಯಾಂಪ್, ಜನತಾ ಕಾಲೊನಿ, ರಾಯರ ಕೆರೆ, ನಿಶಾನಿ ಕ್ಯಾಂಪ್, ಡ್ರೆಸೆಸ್ ಕ್ಯಾಂಪ್, ಪಿಎಲ್‌ಸಿ ಏರಿಯಾ, ಟಿಬಿ ಡ್ಯಾಂ ಏರಿಯಾ ಗ್ರಾಹಕರು ಸಭೆಯಲ್ಲಿ ಪಾಲ್ಗೊಳ್ಳಬಹುದು.
ನಗರ ಉಪವಿಭಾಗ-೨:
ಮಧ್ಯಾಹ್ನ ೩.೩೦ಕ್ಕೆ ಹೊಸಪೇಟೆ ಜೆಸ್ಕಾಂ ನಗರ ಉಪವಿಭಾಗ-೨ರ ವ್ಯಾಪ್ತಿಯ ಗ್ರಾಹಕರ ಸಭೆ ಹಮ್ಮಿಕೊಂಡಿದ್ದು, ಏಆರ್‌ಕೆ ಗ್ರಾನೈಟ್ಸ್, ಸಂಕ್ಲಾಪುರ ಇಂಡಸ್ಟಿçÃಯಲ್ ಏರಿಯಾದವರು ಭಾಗವಹಿಸಬಹುದು. ವಿದ್ಯುತ್ ಪೂರೈಕೆ ಹಾಗೂ ಇತರ ಸಮಸ್ಯೆಗಳಿದ್ದಲ್ಲಿ ತಮ್ಮ ಅಹವಾಲು ಸಲ್ಲಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.