ನೂತನ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ: ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚನೆ

Power Cut New
Published on

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಮಡುವಿನಕೋಡಿ(ದೊಡ್ಡ ಯಾಚೇನಹಳ್ಳಿ) ಗ್ರಾಮದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಉಪಕೇಂದ್ರಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ 66 ಕೆ.ವಿ. ಲಿಲೋ ಮಾರ್ಗದಲ್ಲಿ ಮಾ.7 ಅಥವಾ ಅನಂತರ ವಿದ್ಯುತ್ ಹರಿಸಲಾಗುವುದು.

ಈ ಹಿನ್ನೆಲೆಯಲ್ಲಿ ಹರಿಹರಪುರ, ದೊಡ್ಡಯಾಚೇನಹಳ್ಳಿ, ಮಡುವಿನಕೊಡಿ ಹಾಗೂ ಸುತ್ತಲ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಹಾದು ಹೋಗಲಿದೆ. ಆದ್ದರಿಂದ ಸಾರ್ವಜನಿಕರು ಗೋಪುರಕ್ಕೆ ಜಾನುವಾರು ಕಟ್ಟುವುದಾಗಲಿ, ಲೋಹನ ಪಟ್ಟಿ ತೆಗೆಯುವುದಾಗಲಿ, ಹತ್ತುವುದಾಗಲಿ, ತಂತಿ ಮುಟ್ಟುವುದಾಗಲಿ, ಗಿಡ ನೆಡುವುದಾಗಲಿ ಮಾಡುವುದು ತುಂಬಾ ಅಪಾಯಕಾರಿಯಾಗುವುದರ ಜತೆಗೆ ಪ್ರಾಣ ಹಾನಿಯಾಗಬಹುದು. ಈ ಸೂಚನೆ ಉಲ್ಲಂಘಿಸಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರಿಯಲ್ಲ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net