ವಿದ್ಯುತ್‌ನಿಂದಾಗುವ ಅವಘಡಗಳ ಕುರಿತು ಎಚ್ಚರವಹಿಸಿ

29mnv03
ಮಾನ್ವಿ ಕಲ್ಮಠ ಪದವಿ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯುತ್ ಸಂರಕ್ಷಣಾ ಸುರಕ್ಷತಾ ಸಪ್ತ್ತಾಹ ಕಾರ್ಯಕ್ರಮದಲ್ಲಿ ರಾಯಚೂರು ಜೆಸ್ಕಾಂ ಉಪ ವಿದ್ಯುತ್ ಪರಿವೀಕ್ಷಕ ಸತೀಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ಉಪನ್ಯಾಸಕ ರಾಘವೇಂದ್ರ ಸುಂಕೇಶ್ವರ ಇದ್ದರು.
Published on

ಮಾನ್ವಿ: ವಿದ್ಯುತ್‌ನಿಂದ ಉಪಯೋಗದ ಜತೆಗೆ ಅಪಾಯವೂ ಇದ್ದು ಅದರಿಂದ ದೂರವಿರಬೇಕು ಎಂದು ರಾಯಚೂರು ಜೆಸ್ಕಾಂ ಉಪ ವಿದ್ಯುತ್ ಪರಿವೀಕ್ಷಕ ಸತೀಶ ಹೇಳಿದರು.

ಕಲ್ಮಠ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಇಂಧನ ಇಲಾಖೆ ಹಮ್ಮಿಕೊಂಡ ವಿದ್ಯುತ್ ಸಂರಕ್ಷಣಾ ಸುರಕ್ಷತಾ ಸಪ್ತಾಹ 2024 ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವರು ವಿದ್ಯುತ್ ಬಂದ್ ಮಾಡದೇ ರಿಪೇರಿ ಮಾಡಲು ಮುಂದಾಗುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದರು. ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿ ಬಳಕೆ ಮತ್ತು ಸಂರಕ್ಷಣಾ ವಿಧಾನ ಹಾಗೂ ಅದರಿಂದ ಆಗುವಂತಹ ಅನಿರೀಕ್ಷಿತ ಘಟನೆಗಳ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ಉಪನ್ಯಾಸಕರಾದ ದೇವೇಂದ್ರಪ್ಪ, ರಾಘವೇಂದ್ರ ಸುಂಕೇಶ್ವರ, ಶಾರದಾ, ಎನ್‌ಸ್ಸೆಸ್ಸೆ ಅಧಿಕಾರಿ ಆನಂದ ಉಪ್ಪಳ, ದೇವಪ್ಪ, ಹನುಮಂತರಾಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net