

ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ೆ.24ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ನಗರ ಸೇರಿದಂತೆ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಸುಭಾಷ್‌ನಗರ, ಅಶೋಕನಗರ, ವಿ.ವಿ ರಸ್ತೆ, ಹೊಸಹಳ್ಳಿ, ವಿನಾಯಕ ಬಡಾವಣೆ, ನೂರಡಿ ರಸ್ತೆ, ನೆಹರು ನಗರ, ದ್ವಾರಕನಗರ, ಗಾಂಧಿನಗರ, ಶ್ರೀರಾಮನಗರ, ಕಾವೇರಿ ನಗರ 1 ಮತ್ತು 2ನೇ ಹಂತ, ಚಂದ್ರದರ್ಶನ, ಚಾಮುಂಡೇಶ್ವರಿನಗರ, ಅನ್ನಪೂರ್ಣೇಶ್ವರಿ ನಗರ, ಶಂಕರನಗರ, ಇಂಡುವಾಳು, ಕಿರಗಂದೂರು, ಕಲ್ಲಹಳ್ಳಿ, ಕ್ಯಾತಂಗೆರೆ ಹಾಗೂ ಗ್ರಾಮಾಂತರ ಪ್ರದೇಶಗಳಾದ ಕಾರಸವಾಡಿ, ಮಂಗಲ, ಹನಿಯಂಬಾಡಿ, ಚೀರನಹಳ್ಳಿ, ಹೆಬ್ಬಕವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ.ಹುಲಿಕೆರೆ, ಬಿ.ಹುಲಿಕೆರೆ ಮತ್ತು ಐ.ಪಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ಅಂತೆಯೇ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ಶಂಕರಪುರ, ಜೈನ್ ಸ್ಟ್ರೀಟ್, ಬೀಡಿ ಕಾಲನಿ, ಜಬರ್ ಸರ್ಕಲ್, ವಿನಾಯಕಾನಂದ ಬಡಾವಣೆ ಹಾಗೂ ಗ್ರಾಮಾಂತರ ಪ್ರದೇಶಗಳಾದ ಗೋಪಾಲಪುರ, ಚಿಕ್ಕಮಂಡ್ಯ, ಸಾತನೂರು, ಕೊಮ್ಮೇರಹಳ್ಳಿ, ಹುಲಿವಾನ, ಕೆ. ಗೌಡಗೆರೆ, ಎಚ್.ಮಲಿಗೆರೆ, ಎಸ್.ಐ.ಕೋಡಿಹಳ್ಳಿ, ಎಚ್.ಕೋಡಿಹಳ್ಳಿ, ಸಂಪಹಳ್ಳಿ, ಗೊರವಾಲೆ, ಬಿ.ಹೊಸಹಳ್ಳಿ, ಬೀರಗೌಡನಹಳ್ಳಿ ಹಾಗೂ ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದ ನಗರ ಪ್ರದೇಶಗಳಾದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕಾ ಬಡಾವಣೆ, ಎಂ.ಸಿ ರಸ್ತೆ, ತಾವರೆಗೆರೆ, ನೆಹರು ನಗರ, ಉದಯಗಿರಿ, ಸಾದತ್ ಮೊಹಲ್ಲ, ಚನ್ನಯ್ಯ ಬಡಾವಣೆ, ಸಿದ್ಧಾರ್ಥ ಬಡಾವಣೆ, ಬೆಂಗಳೂರು ಮುಖ್ಯ ರಸ್ತೆಯ ಹೆಬ್ಬಾಳ ಹಾಗೂ ಗ್ರಾಮಾಂತರ ಪ್ರದೇಶಗಳಾದ ಶ್ರೀನಿವಾಸಪುರ ಗೇಟ್, ಹನಕೆರೆ, ಬಸವನಪುರ, ಬೂದನೂರು, ಭೂತನಹೊಸೂರು, ಚನ್ನಪ್ಪನದೊಡ್ಡಿ, ಅಂಬರಹಳ್ಳಿ ಹಾಗೂ ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದ ಹೊಡಾಘಟ್ಟ, ಕೀಲಾರ, ಹನಕೆರೆ, ಹಳೆಬೂದನೂರು, ಹೊಸಬೂದನೂರು, ಈಚಗೆರೆ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಹೊನಗಾನಹಳ್ಳಿಮಠ, ತುಂಬಕೆರೆ, ಚಾಮಲಾಪುರ, ಉಮ್ಮಡಹಳ್ಳಿ, ಬಸವನಪುರ ಭಾಗದಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.