ತ್ರೈಮಾಸಿಕ ಕಾರ್ಯನಿರ್ವಹಣೆ: ಫೆ.9ರಂದು ಮಂಡ್ಯ, ಮದ್ದೂರು ತಾಲೂಕಿನ ಹಲವು ಗ್ರಾಮಕ್ಕಿಲ್ಲ ವಿದ್ಯುತ್ ಪೂರೈಕೆ

POWER CUT LOGO NEW
Published on

ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಫೆ.9ರಂದು ಮಂಡ್ಯ ಹಾಗೂ ಮದ್ದೂರು ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಕೋಲಕಾರನದೊಡ್ಡಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತಗ್ಗಹಳ್ಳಿ, ಕೋಲಕಾರನದೊಡ್ಡಿ, ಹೆಮ್ಮಿಗೆ, ಸೂನಗನಹಳ್ಳಿ, ಪುರ, ಲೋಕಸರ, ಹಳುವಾಡಿ, ಕಮ್ನಾಯಕನಹಳ್ಳಿ, ಟಿ.ಮಲ್ಲಿಗೆರೆ, ಕಬ್ಬನಹಳ್ಳಿ, ತಿಮ್ಮನಹೊಸೂರು, ಬಿ.ಹೊಸೂರು, ಗೋಪನಹಳ್ಳಿ, ಯಡಗನಹಳ್ಳಿ, ಮಾದರಹಳ್ಳಿ ಮತ್ತು ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರದ ಕೆರಗೋಡು, ದೊಡ್ಡಗರುಡನಹಳ್ಳಿ, ಬಿಳಿದೇಗಲು, ಮುದಗಂದೂರು, ಮಾರಗೌಡನಹಳ್ಳಿ, ಬಿ.ಹೊಸೂರು, ಹಂಪಾಪುರ, ಕಲ್ಮಂಟಿದೊಡ್ಡಿ, ಸೌದೇನಹಳ್ಳಿ, ಬೆಟ್ಟಹಳ್ಳಿ, ಬೀಚನಹಳ್ಳಿ, ಪುರದಕೊಪ್ಪಲು, ಎಂ.ಹೊನ್ನೇನಹಳ್ಳಿ, ಬಿದರಕಟ್ಟೆ, ಬೆನ್ನಹಟ್ಟಿ, ಹನುಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net