ತುರ್ತು ಕಾಮಗಾರಿ ಹಿನ್ನೆಲೆ: ಸೆ.5 ಮತ್ತು 6ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

power-cut
Published on

ಮಂಡ್ಯ: ತುರ್ತು ಕಾರ್ಯನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.5 ಮತ್ತು 6ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದ ನಗರ ಪ್ರದೇಶಗಳಾದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕಾ ಬಡಾವಣೆ, ಎಂ.ಸಿ.ರಸ್ತೆ, ತಾವರೆಗೆರೆ, ನೆಹರುನಗರ, ಉದಯಗಿರಿ, ಸಾದತ್ ಮೊಹಲ್ಲ, ಚನ್ನಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ಬೆಂಗಳೂರು ಮುಖ್ಯ ರಸ್ತೆಯ ಹೆಬ್ಬಾಳ, ಗ್ರಾಮಾಂತರ ಪ್ರದೇಶಗಳಾದ ಶ್ರೀನಿವಾಸಪುರ ಗೇಟ್, ಹನಕೆರೆ ಐ.ಪಿ ವ್ಯಾಪ್ತಿ, ಬಸವನಪುರ ಐ.ಪಿ. ವ್ಯಾಪ್ತಿ, ಬೂದನೂರು, ಭೂತನ ಹೊಸೂರು, ಚನ್ನಪ್ಪನ ದೊಡ್ಡಿ, ಅಂಬರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದ ಹೊಡಾಘಟ್ಟ, ಕೀಲಾರ, ಹನಕೆರೆ, ಹಳೆ ಬೂದನೂರು, ಹೊಸಬೂದನೂರು, ಈಚಗೆರೆ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಹೊನಗಾನಹಳ್ಳಿಮಠ, ತುಂಬಕೆರೆ, ಚಾಮಲಾಪುರ, ಉಮ್ಮಡಹಳ್ಳಿ, ಬಸವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net