ಭೂಗತ ವಿದ್ಯುತ್ ಕೇಬಲಿಂಗ್ ಕಾಮಗಾರಿ

Manjunath-HSK-01
filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 123.11667; hist255: 0.0; hist252~255: 0.0; hist0~15: 0.0;
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ

ಮುಂದಿನ 20 ವರ್ಷಗಳ ಅಭಿವೃದ್ಧಿ ದೃಷ್ಟಿಯಲ್ಲಿ 100 ಕೋಟಿ ರೂ.ವೆಚ್ಚದಲ್ಲಿ 216 ಕಿ.ಮೀ 67 ಮೆಗಾವ್ಯಾಟ್ ಪ್ರಸರಣ ಸಾಮರ್ಥ್ಯದ ಭೂಗತ ಕೇಬಲಿಂಗ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಇದು ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲೇ ತಾಲೂಕಿನಲ್ಲಿ ಮೊದಲ ಕಾಮಗಾರಿಯಾಗಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು.

ನಗರದ ಬೆಸ್ಕಾಂ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ವಿದ್ಯುತ್ ಕೇಬಲಿಂಗ್ ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಗರದಲ್ಲಿ 30 ಮೆಗಾವ್ಯಾಟ್ ವಿದ್ಯುತ್ ಪ್ರಸರಣ ವ್ಯವಸ್ಥೆ ಇದ್ದು ಈಗಾಗಲೆ ಸುಮಾರು 35 ರಿಂದ 37 ಮೆಗಾವ್ಯಾಟ್ ವಿದ್ಯುತ್ ಪ್ರಸರಣ ಮಾಡಲಾಗುತ್ತಿದೆ, ಒತ್ತಡದಲ್ಲಿ ಕೆಲವು ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಕಂಡು ಬರುವುದು ಸಾಮಾನ್ಯವಾಗಿದೆ ಆದ್ದರಿಂದ ಇದನ್ನು ಸರಿಪಡಿಸಲು ಇಂಧನ ಸಚಿವರಲ್ಲಿ ಕಳೆದ ವರ್ಷ ಮನವಿ ಸಲ್ಲಿಸಲಾಗಿತ್ತು. ಸಂಪೂರ್ಣ ಡಿಪಿಆರ್ ಸಿದ್ದಪಡಿಸಿ ಸಂಪುಟದಲ್ಲಿ ಮಂಜೂರಾತಿ ಪಡೆದು ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದೂರದೃಷ್ಟಿ ಹಾಗೂ ಸಮನ್ವಯತೆ ಇದ್ದಲ್ಲಿ ಮಾತ್ರ ಇಂತಹ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುಂದಿನ 20 ವರ್ಷಗಳ ಅಭಿವೃದ್ಧಿ ಗಮನದಲ್ಲಿಟು 67 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುವ ಯೋಜನೆಯಾಗಿದ್ದು ಗುಣಮಟ್ಟದ ವಿದ್ಯುತ್ ಪ್ರಸರಣದ ಜತೆ ಸೋರಿಕೆ ತಡೆಯುವುದು, ವಿದ್ಯುತ್ ಅವಘಡಗಳನ್ನು ತಡೆಯಬಹುದಾಗಿದೆ ಎಂದರು. ತಾಲೂಕಿನಲ್ಲಿರುವ 6 ವಿದ್ಯುತ್ ಪ್ರಸರಣಾ ಘಟಕಗಳ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು ಅಭಿವೃದ್ಧಿ ಹೊಂದುತ್ತಿರುವ ತಾಲೂಕಿನ ಜನತೆಗೆ ಉತ್ತಮ ಸವಲತ್ತುಗಳನ್ನು ನೀಡಲು ಇಂತಹ ಕಾಮಗಾರಿಗಳು ಅವಶ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net