ವಿದ್ಯುತ್ ತಂತಿ ಹರಿದು ಕಬ್ಬಿನ ಗದ್ದೆಗೆ ಬೆಂಕಿ

Electric wire, sugarcane field, fire, Revagaon, sugarcane crop,
ರೇವತಗಾಂವ ಗ್ರಾಮದ ರೈತ ಅಪ್ಪಾಸಾಬ ಹಾವಿನಾಳ ಅವರ ಕಬ್ಬಿನ ಗದ್ದೆಯಲ್ಲಿ ಮೇನ್‌ಲೈನ್ ತಂತಿ ಹರಿದು ಬಿದ್ದು ಕಬ್ಬು ಸುಟ್ಟಿರುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಎಸ್.ಎಲ್.ಝಂಡೆ, ಲೈನ್‌ಮನ್ ಅಂಬಿ ಇತರರಿದ್ದರು.
Published on

ರೇವತಗಾಂವ: ಗ್ರಾಮದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದು ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಎರಡು ಎಕರೆ ಕಬ್ಬು ಬೆಳೆ ಸೋಮವಾರ ಸುಟ್ಟಿದೆ.

ನಿವರಗಿ ಕೆಇಬಿಯಿಂದ ರೇವತಗಾಂವ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೇನ್‌ಲೈನ್ ತಂತಿ ಹರಿದು ಅಪ್ಪಾಸಾಬ ಚನ್ನಗೊಂಡ ಹಾವಿನಾಳ ಅವರ ಎರಡು ಎಕರೆ ಕಬ್ಬು ಸುಟ್ಟಿದೆ.

ಕೆಇಬಿ ಅಧಿಕಾರಿ ಭೇಟಿ: ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವವರೆಗೆ ಹರಿದು ಬಿದ್ದಿರುವ ತಂತಿ ದುರಸ್ತಿಗೊಳಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ರೈತ ಪಟ್ಟು ಹಿಡಿದಿರುವುದರಿಂದ ಸ್ಥಳಕ್ಕೆ ಚಡಚಣ ಪ್ರಭಾರಿ ಶಾಖಾಧಿಕಾರಿ ಎಸ್.ಎಲ್.ಝಂಡೆ ಹಾಗೂ ಲೈನ್‌ಮನ್ ಅಂಬಿ ಅವರು ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಅಲ್ಲದೆ ಘಟನಾ ಸ್ಥಳಕ್ಕೆ ಗ್ರಾಮ ಸೇವಕ ಅಮಸಿದ್ದ ಬನ್ನೆ ಹಾಗೂ ಗ್ರಾಪಂ ಸದಸ್ಯ ಮಹಾದೇವ ಅಂಕಲಗಿ, ಚಡಚಣ ಪೊಲೀಸ್ ಠಾಣೆಯ ಸಿಬ್ಬಂದಿ ಕೆ.ಬಿ.ಪಾಟೀಲ, ಕೆ.ಐ.ಹಗನೂರ ಭೇಟಿ ನೀಡಿ ಪರಿಶೀಲಿಸಿದರು. ಕಬ್ಬು ಸುಟ್ಟಿರುವ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net