

ಹಿರೇಕೆರೂರ: ವಿದ್ಯುತ್ ತಂತಿಯ ಕಿಡಿ ಹಾರಿ ಜಮೀನಿನಲ್ಲಿ ಹಾಕಿದ್ದ ಮೆಕ್ಕೆಜೋಳದ ತೆನೆ ಸುಟ್ಟು ಹೋದ ಘಟನೆ ತಾಲೂಕಿನ ಬಸರಿಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಪವನಕುಮಾರ ಬಸನಗೌಡ ಹೊಲಜ್ಜೇರ ಎಂಬುವರ ಮೆಕ್ಕೆಜೋಳದ ತೆನೆ ಸುಟ್ಟಿರುವುದು.
ಇವರು 4.22 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ತೆನೆಗಳನ್ನು ಗೂಡು ಹಾಕಿದ್ದರು. ಇದರ ಮೇಲಿದ್ದ ವಿದ್ಯುತ್ ತಂತಿಯಿಂದ ಹತ್ತಿಕೊಂಡ ಕಿಡಿ ಸಿಡಿದು ಮೆಕ್ಕೆಜೋಳಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರಿಂದ 70 ಕ್ವಿಂಟಾಲ್ನಷ್ಟು ಮೆಕ್ಕೆಜೋಳ ತೆನೆ ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.