

ಬೆಳ್ತಂಗಡಿ: ಕಳೆಂಜ ಗ್ರಾಮದ ಶಾಲೆತಡ್ಕ ಜಂಕ್ಷನ್‌ನಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭ ಶುಕ್ರವಾರ ವಿದ್ಯುತ್ ಶಾಕ್ ತಗುಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮೂಡುಬಿದಿರೆ ಗುತ್ತಿಗೆದಾರ ಕುಮಾರ್ ಇಲೆಕ್ಟ್ರಿಕಲ್ಸ್‌ನ ಸಿಬ್ಬಂದಿ ಪ್ರತಾಪ್ ಮೂಡುಬಿದಿರೆ (20) ಮೃತಪಟ್ಟವರು. ನಾಗಪ್ಪ ಮೂಡುಬಿದಿರೆ ಹಾಗೂ ಕಿಶೋರ್ ಮೂಡುಬಿದಿರೆ ಗಾಯಗೊಂಡಿದ್ದು, ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭ ಕಾರ್ಯನಿರ್ವಹಿಸುತ್ತಿದ್ದ ಪ್ರತಾಪ್ ಅವರಿಗೆ ವಿದ್ಯುತ್ ಕಂಬದಲ್ಲಿ ಇರುವಾಗಲೇ ಶಾಕ್ ತಗುಲಿ ಅಲ್ಲೇ ಮೃತಪಟ್ಟರು.