ವಿದ್ಯುತ್‌ ಶಾಕ್‌: ತೋಟಕ್ಕೆ ಬಂದ ಕಾಡಾನೆ ಸಾವು

elephant-death
Published on

ಯಲ್ಲಾಪುರ: ತೋಟಕ್ಕೆ ಬಂದ ಕಾಡಾನೆಯೊಂದು ಆಕಸ್ಮಿಕವಾಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ದೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಟ್ಟಿಗೆ ಗ್ರಾಮದ ಇಡಕೆಮನೆ ಬಳಿ ಗುರುವಾರ ರಾತ್ರಿ ನಡೆದಿದೆ.

ಇಡಕೆಮನೆಯ ಪರಮೇಶ್ವರ ರಾಮಚಂದ್ರ ಕುಣಬಿ ಅವರ ತೋಟಕ್ಕೆ ಕಾಡಾನೆ ಬಂದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ, ಶಾಕ್ ತಗುಲಿ ಆನೆ ಮೃತಪಟ್ಟಿದೆ ಎನ್ನಲಾಗಿದೆ. ಇಡಕೆಮನೆ ಭಾಗದಲ್ಲಿ ಎಲ್.ಟಿ ಲೈನ್ ತುಂಬಾ ಕೆಳಗಿನಿಂದ ಹಾದು ಹೋಗಿದ್ದು, ಇದು ಆನೆಗೆ ತಗುಲಿದೆ. ಆಹಾರ ಅರಸಿ ತೋಟದತ್ತ ಬಂದ ಕಾಡಾನೆ ಪ್ರಾಣವನ್ನೇ ಕಳೆದುಕೊಂಡಿದೆ. 

ಈ‌ ಕುರಿತು ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡರು. ನಂತರ ಅರಣ್ಯ ಇಲಾಖೆಯವರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net