ದೊಡ್ಡಬಳ್ಳಾಪುರ: ನಗರದ ಮಹಿಳಾ ಠಾಣಾ ಆವರಣದಲ್ಲಿ ಗುರುವಾರ ಸಂಜೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ಹೂವಿನಹಾಡಿ ಗ್ರಾಮದ ರಾಕೇಶ್ (35) ಗಾಯಗೊಂಡವರು. ಮಹಿಳಾ ಠಾಣೆ ಪಕ್ಕದಲ್ಲಿ ಶೌಚಗೃಹ ಕಟ್ಟಡ ನಿಮಾರ್ಣ ಮಾಡಲಾಗುತ್ತಿದ್ದು, ಗುರುವಾರ ರಜೆ ಇದ್ದ ಕಾರಣ ನಾಳಿನ ಕೆಲಸಕ್ಕೆಂದು ಕಬ್ಬಿಣದ ಕಂಬಿಗಳನ್ನು ಕಟ್ಟಡದ ಮೇಲೆ ಇಡಲು ಹೋದಾಗ ಅವಡ ಸಂಭವಿಸಿದೆ. ರಾಕೇಶ್ ದೇಹದ ಬಲಭಾಗದಲ್ಲಿ ಶೇ.20 ಸುಟ್ಟಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳಿಸಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.