ವಿದ್ಯುತ್ ಶಾಕ್, ಜಾನುವಾರುಗಳು ಸಾವು

electric shock
Published on

ಕಾಸರಗೋಡು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಐದು ಜಾನುವಾರುಗಳು ಸಾವಿಗೀಡಾಗಿವೆ. ವಿದ್ಯುತ್ ಶಾಕ್‌ನಿಂದ ಹೊಸದುರ್ಗ ಚಪ್ಪಾರಪಡವ್ ಕಣಾರವಯಲ್ ನಿವಾಸಿ, ಕೃಷಿಕ ದಾಮೋದರನ್ ಅವರ ಪತ್ನಿ ಶ್ಯಾಮಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ಯಾಮಲಾ ಮಂಗಳವಾರ ಬೆಳಗ್ಗೆ ಹಟ್ಟಿಗೆ ಹಾಲು ಕರೆಯಲು ತೆರಳಿ ಬಲ್ಬ್ ಸ್ವಿಚ್ ಹಾಕಲು ಮುಂದಾಗುತ್ತಿದ್ದಂತೆ ಶಾಕ್ ತಗುಲಿದೆ. ನಂತರ ನೋಡುವಾಗ ಹಟ್ಟಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ವಯರ್ ತುಂಡಾಗಿ ಬಿದ್ದಿದ್ದು, ಹಟ್ಟಿಯೊಳಗಿದ್ದ 5 ದನ ಸಾವಿಗೀಡಾಗಿರುವುದು ಕಂಡುಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net