

ನಾಪೋಕ್ಲು: ಭಾರಿ ಮಳೆಯಿಂದಾಗಿ ಶನಿವಾರ ವಿದ್ಯುತ್ ಕಂಬ ರಸ್ತೆಗೆ ವಾಲಿರುವುದರಿಂದ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ನಾಪೋಕ್ಲು-ಮಡಿಕೇರಿ ಮುಖ್ಯ ರಸ್ತೆಯ ಚೆರಿಯಪರಂಬು-ಕಲ್ಲುಮೊಟ್ಟೆಗೆ ಸಂಪರ್ಕಿಸುವ ಜಂಕ್ಷನ್ ಸಮೀಪ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬದ ಆಧಾರ (ಸ್ಟೇ ವಯರ್ ) ತಂತಿ ಕಟ್ಟಾದ ಪರಿಣಾಮ ರಸ್ತೆಗೆ ವಾಲಿತ್ತು. ಮಾಹಿತಿ ತಿಳಿದ ಇಲ್ಲಿನ ಸೆಸ್ಕ್ ಅಧಿಕಾರಿ ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಾಲಿದ ವಿದ್ಯುತ್ ಕಂಬವನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಿದರು.