ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಎಸ್.ಸಿ. ಉನ್ನತಿಯಲ್ಲಿ ವಿದ್ಯುತ್ ಕಂಬಗಳು ಆತಂಕ ಸೃಷ್ಟಿಸಿವೆ. ಇಲ್ಲಿನ ಕುಸುಮಾ ಎಂಬುವರ ಮನೆ ಬಳಿ ವಾಲಿಕೊಂಡ ವಿದ್ಯುತ್ ಕಂಬ ಯಾವುದೇ ಕ್ಷಣ ಮನೆ ಮೇಲೆ ಬೀಳುವ ಆತಂಕವಿದೆ. ಇನ್ನೊಂದು ಕಂಬ ಅಶೋಕ ಎಂಬುವರ ಮನೆಯ ಹತ್ತಿರದಲ್ಲೇ ಇದ್ದು ಈ ಪರಿಸರದಿಂದ ಹಾದು ಹೋದ ತಂತಿ ಮನೆಯ ಮೇಲ್ಭಾಗಕ್ಕೆ ಹಾಗೂ ತೆಂಗಿನಮರಕ್ಕೂ ಸ್ಪರ್ಶಿಸುತ್ತಿದೆ. ಮರದ ಕೊಂಬೆ ತಾಗಿ ಪದೇಪದೆ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಈ ಪರಿಸರದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.