3 ಡಿಪೋಗಳಿಂದ ಎಲೆಕ್ಟ್ರಿಕ್​ ಬಸ್​ ಸೇವೆ

BMTC electric bus
Published on

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತಿರುವ ಎಲೆಕ್ಟ್ರಿಕ್​ ಬಸ್​ಗಳನ್ನು ಯಶವಂತಪುರ, ಕೆಂಗೇರಿ ಮತ್ತು ಕೆ.ಆರ್​.ಪುರ ಟಕಗಳಿಂದ ಸೇವೆ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಫೇಮ್​ ಇಂಡಿಯಾ 2ರ ಅಡಿಯಲ್ಲಿ ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್​ ಬಸ್​ಗಳನ್ನು ಪಡೆಯುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಕೆಲ ಸಂಸ್ಥೆಗಳು ಈಗಾಗಲೆ ತಮ್ಮ ಬಸ್​ಗಳ ಪ್ರಾಯೋಗಿಕ ಪರೀೆಗೆ ಬಿಎಂಟಿಸಿಗೆ ನೀಡಿವೆ. ಅದರ ನಡುವೆಯೇ ಟೆಂಡರ್​ ಪ್ರಕ್ರಿಯೆಗೆ ಬಿಎಂಟಿಸಿ ಚಾಲನೆ ನೀಡಿದ್ದು, 12 ಮೀ. ಉದ್ದದ ಹವಾನಿಯಂತ್ರಿತ ವ್ಯವಸ್ಥೆ ಇಲ್ಲದ (ನಾನ್​ ಎಸಿ) 300 ಬಸ್​ಗಳ ಪೂರೈಸುವಂತೆ ಖಾಸಗಿ ಸಂಸ್ಥೆಗಳಿಗೆ ಸೂಚಿಸಲಾಗುತ್ತಿದೆ. ಅಲ್ಲದೆ, ಬಿಎಂಟಿಸಿ ಈಗಾಗಲೆ ನಿರ್ಧರಿಸಿರುವಂತೆ ಗುತ್ತಿಗೆ ಆಧಾರದಲ್ಲಿ ಪಡೆಯಲಾಗುವ ಬಸ್​ಗಳನ್ನು ಯಶವಂತಪುರ, ಕೆಂಗೇರಿ ಮತ್ತು ಕೆ.ಆರ್​.ಪುರ ಡಿಪೋಗಳ ಮೂಲಕ ಕಾರ್ಯಾಚರಣೆಗೊಳಿಸಲಾಗುತ್ತದೆ.

ದಿನಕ್ಕೆ 200 ಕಿ.ಮೀ. ಸಂಚಾರ: ಬಿಎಂಟಿಸಿ ಪ್ರಕಾರ ಖಾಸಗಿ ಸಂಸ್ಥೆಗಳು ಪೂರೈಸುವ ಬಸ್​ಗಳು ಪ್ರತಿದಿನ 200 ಕಿ.ಮೀ.ನಂತೆ ವಾಷಿರ್ಕ 70 ಸಾವಿರ ಕಿ.ಮೀ. ಸಂಚರಿಸಬೇಕಿದೆ. ಬಸ್​ನ ವೇಗ ಪ್ರತಿ ಗಂಟೆಗೆ 10ರಿಂದ 50 ಕಿ.ಮೀ.ಗೆ ನಿಗದಿ ಮಾಡಬೇಕಿದೆ. ಜತೆಗೆ ಪ್ರತಿದಿನ 16ರಿಂದ 20 ಗಂಟೆ ಸಂಚರಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ತಿಳಿಸಲಾಗಿದೆ.

ಡಿಪೋ, ನಿಲುಗಡೆ ತಾಣಗಳಲ್ಲಿ ಚಾಜಿರ್ಂಗ್​: ಬಸ್​ಗಳು ಒಮ್ಮೆ ಚಾರ್ಚ್​ ಮಾಡಿದರೆ ಕನಿಷ್ಠ 250 ಕಿ.ಮೀ. ಸಂಚರಿಸಬೇಕು. ಅಲ್ಲದೆ, ಬಸ್​ಗಳು ಸೇವೆ ನೀಡುವಾಗ ಚಾರ್ಜ್​ ಖಾಲಿಯಾದರೆ ಅದನ್ನು ಮರುಪೂರಣ ಮಾಡಲು ಬಸ್​ ನಿಲುಗಡೆ ತಾಣ ಮತ್ತು ಟಕಗಳಲ್ಲಿ ಚಾಜಿರ್ಂಗ್​ ಸ್ಟೇಷನ್​ ನಿಮಿರ್ಸಲಾಗುತ್ತದೆ. ಅದರ ಹೊಣೆಯನ್ನು ಗುತ್ತಿಗೆ ಆಧಾರದಲ್ಲಿ ಬಸ್​ ನೀಡುವ ಸಂಸ್ಥೆಗೆ ನೀಡಲಾಗುತ್ತದೆ. ಅದರ ಜತೆಗೆ ಬಸ್​ಗಳು ಸೇವೆ ನೀಡುವಾಗ ಕೆಟ್ಟು ನಿಂತರೆ ಅದನ್ನು ತೆಗೆದುಕೊಂಡು ಬರಲು ಟೋಯಿಂಗ್​ ಹುಕ್​ ಅಳವಡಿಸಬೇಕಿದೆ.

ಸಿಬ್ಬಂದಿಗೆ ತರಬೇತಿ: ಬಸ್​ ನೀಡುವ ಸಂಸ್ಥೆಯು ಎಲೆಕ್ಟ್ರಿಕ್​ ಬಸ್​ಗಳನ್ನು ಚಲಾಯಿಸುವುದು ಮತ್ತು ಅವುಗಳ ನಿರ್ವಹಣೆ ಮಾಡಲು ಬಿಎಂಟಿಸಿ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕಿದೆ. 1 ಸಾವಿರಕ್ಕೂ ಹೆಚ್ಚಿನ ಚಾಲಕರು, 600ಕ್ಕೂ ಹೆಚ್ಚಿನ ಮೆಕ್ಯಾನಿಕ್​ ಸೇರಿ ಇನ್ನಿತರ ಸಿಬ್ಬಂದಿಗೆ ಬಸ್​ ಕುರಿತ ಸಂರ್ಪೂಣ ಮಾಹಿತಿ ನೀಡಬೇಕಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net