ಎಲೆಕ್ಟ್ರಿಕ್ ಮಷಿನ್ ಗಳಿರುವ ಬಲೂನ್  ಬೆಳಗಾವಿಗೆ ಬಂದಿದ್ದು ಎಲ್ಲಿಂದ?

IMG-20230309-WA0010.jpg
Published on

ಬೆಳಗಾವಿ (ಎಂ.ಕೆ.ಹುಬ್ಬಳ್ಳಿ): ಎಲ್ಲಿಂದಲೋ ಬಂದು ಜಮೀನಿನಲ್ಲಿ ಬಿದ್ದಿರುವ ಬಲೂನಲ್ಲಿ ಕೆಲ ಎಲೆಕ್ಟ್ರಿಕ್ ಮಷೀನಗಳು ಪತ್ತೆ ಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.‌

ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಯಮನಪ್ಪ ಹುಬ್ಬಳ್ಳಿ ಅವರ ಜಮೀನಿನಲ್ಲಿ ವಿಚಿತ್ರ ಬಲೂನ ಬಂದು ಬಿದ್ದಿದ್ದು, ಬಿಳಿ ಬಣ್ಣದ ಎಲೆಕ್ಟ್ರಾನಿಕ್ ಬಲೂನ ಇದಾಗಿದ್ದು, ಎಲ್ಲಿಂದ ಬಂದಿದೆ, ಯಾವಾಗ ಹಾರಿ ಬಂದಿದೆ ಎಂದು ಗೊತ್ತಾಗಿಲ್ಲ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೋಲಿಸರು ಬಲೂನನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದರು . ಕೆಲ ದಿನಗಳ ಹಿಂದೆ ಯುಎಸ್ಎ ನಲ್ಲಿ ಚೈನೀಸ ಸ್ಪೈ ಬಲೂನ್ ಸದ್ದು ಮಾಡಿದ್ದು ಅದೆ ಥರ ಇದು ಕೂಡ ಇರಬಹುದೆಂಬ ಶಂಕೆ ಮೂಡಿಸಿದೆ. ಬಲೂನ ನೋಡಲು ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಡಾ.ಸಂಜೀವ ಪಾಟೀಲ ಅವರು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net