ಅರ್ಹರೆಲ್ಲರನ್ನೂ ಮತಪಟ್ಟಿಗೆ ಸೇರಿಸಬೇಕು

CHITRADURGA NEW DC GRJ DIVYA PRRBUjjj
Published on

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ತೃತೀಯ ಲಿಂಗಿಗಳು,ಅಂಗವಿಕಲರು,ದಮನಿತ ಮಹಿಳೆಯರು ಸೇರಿದಂತೆ ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವ ಹಾ ಗೂ ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನದ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದ್ದಾರೆ.

ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಅವರು, ನ.21ರಂದು ನಗರದ ಬಾಲಭವನದಲ್ಲಿ ಮತಪಟ್ಟಿಗೆ ಹೆಸರು ನೋಂದಣಿ ಕು ರಿತಂತೆ ತೃತೀಯ ಲಿಂಗಿಗಳಿಗೆ ಜಾಗೃತಿ ಮೂಡಿಸುವ ಹಾಗೂ ಮತಪಟ್ಟಿಗೆ ಹೆಸರು ಸೇರಿಸಲು 20,ಡಿಸೆಂಬರ್ 3 ಹಾಗೂ ಡಿ.4 ರಂದು ಬೂತ್ ಮಟ್ಟದ ಅಧಿಕಾರಿಗಳಿಂದ ಮನೆ, ಮನೆ ಭೇಟಿ ಕಾರ‌್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಯುವ ಮತದಾರರು

ಅರ್ಹ ಯುವ ಜನರನ್ನು ಪಟ್ಟಿ ಸೇರಿಸಲೂ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಕಾಲೇಜು,ಐಟಿಐ,ಪಾಲಿಟೆಕ್ನಿಕ್,ಇಂಜಿನಿಯ ರಿಂ ಗ್ ಕಾಲೇಜುಗಳಲ್ಲಿಯೇ ದಾಖಲೆಗಳನ್ನು ಪಡೆದು,ಮತ ಪಟ್ಟಿಗೆ ಹೆಸರು ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಾಚಾರ‌್ಯರಿಗೆ ಸೂಚಿಸ ಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಡಿಸಿ ಇ.ಬಾಲಕೃಷ್ಣ ನೇತೃತ್ವದಲ್ಲಿ ನ.19ರಂದು ನಗರದಲ್ಲಿ ಕಾಲೇಜು ಪ್ರಾಚಾರ‌್ಯರ ಸಭೆ ನಡೆಯಲಿದೆ.

ವೋಟರ್‌ಹೆಲ್ಪ್‌ಲೈನ್ ಆ್ಯಪ್ (್ಖಏಅ ಅ) ಅಥವಾ ಗರುಡ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಹೆಸರು ಸೇರ್ಪಡೆ,ತಿದ್ದುಪಡಿ ಇತ್ಯಾದಿ ಪರಿಷ್ಕರಣೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಡಿಸಿ ಕಚೇರಿ ಸಹಾಯವಾಣಿ 08194-222176 ಸಹಾಯವಾಣಿ ಅಥವಾ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದೆಂದು ಡಿಸಿ ತಿಳಿಸಿದ್ದಾರೆ.

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net