ಅಂಜುಮನ್ ಫಲಾವುಲ್ ಮುಸ್ಲಿಮಿನ್ ಸಂಸ್ಥೆ ಆಡಳಿತ ಮಂಡಳಿಗೆ ಚುನಾವಣೆ 16ರಂದು

election logo
Published on

ದಾಂಡೇಲಿ: ನಗರದ ಅಂಜುಮನ್ ಫಲಾವುಲ್ ಮುಸ್ಲಿಮಿನ್ ಸಂಸ್ಥೆಯ ಆಡಳಿತ ಮಂಡಳಿಗೆ ಫೆ. 16ರಂದು ಚುನಾವಣೆ ನಡೆಯಲಿದೆ ಎಂದು ಫಲಾವುಲ್ ಮುಸ್ಲಿಮಿನ್ ಸಂಸ್ಥೆ ಅಧ್ಯಕ್ಷ ತಸ್ವರ್ ಸೌದಾಗರ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1,260 ಸದಸ್ಯರಿರುವ ಸಂಸ್ಥೆಯ ಆಡಳಿತ ಮಂಡಳಿಗೆ 31 ಜನ ಸದಸ್ಯರ ಆಯ್ಕೆ ಮಾಡಲಾಗುವುದು. ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆ. 3ರಂದು ಕೊನೇ ದಿನವಾಗಿದ್ದು, ಫೆ. 4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ. 5ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಫೆ. 16ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಬಂಗೂರನಗರ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದೆ. ಅಂದು ಸಂಜೆ ಮತ ಎಣಿಕೆ ಕಾರ್ಯವೂ ನಡೆಯಲಿದೆ ಎಂದು ತಿಳಿಸಿದರು.

ಬಶೀರ್ ಗಿರಿಯಾಲ, ಜಾವೇದ್ ಈರಾಪುರ, ಮಹಮ್ಮದ್ ಗೌಸ್ ಬೆಟಗೇರಿ, ಅಬ್ದುಲ್ ಖಾನ್ ಜಮಾದಾರ, ಮಸ್ತಾನ್ ಸಾಬ್ ಅತ್ತಾರ, ಮೌಲಾಸಾಬ್ ಹುನಗುಂದ, ಮಹಮ್ಮದ್ ಗೌಸ್ ಖತೀಬ್, ಶರೀಫ್ ಜಾತಿಗೇರ, ಶಕೀಲ್ ಬೆಳಗಾಂವಕರ, ಚಮನ್ ಸಾಬ್ ಶೇಖ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net