ಬಳ್ಳಾರಿ : ಸಿರಗುಪ್ಪ ಪಟ್ಟಣದಲ್ಲಿರುವ ವಕ್ಫ್ ಸಂಸ್ಥೆಯಾದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್ (ಸುನ್ನಿ) ವಕ್ಪ್ ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಏ.21 ರಿಂದ ಮೇ. 10 ರ ವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಸಿರಗುಪ್ಪದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಆಡಳಿತಾಧಿಕಾರಿ ನೂರ್ ಪಾಷಾ ತಿಳಿಸಿದ್ದಾರೆ.
ಏ.28 ರ ಬೆಳಗ್ಗೆ 11.30 ಗಂಟೆಯಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.29 ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ಇರುತ್ತದೆ. ಅದೇ ದಿನ ಮಧ್ಯಾಹ್ನ 03.30 ಗಂಟೆಯ ನಂತರ ಚುನಾವಣಾ ಚಿನ್ಹೆಗಳ ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಮೇ.10 ಶನಿವಾರ ಬೆಳಗ್ಗೆ 08 ಗಂಟೆಯಿಅದ ಮಧ್ಯಾಹ್ನ 03 ಗಂಟೆಯವರೆಗೆ ತಾಲೂಕು ಕ್ರೀಡಾಂಗಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ)ವಕ್ಪ್ ಸಂಸ್ಥೆಗೆ ಚುನಾವಣೆ ನಡೆಸಿ, ಅದೇ ದಿನ ಸಂಜೆ 04 ಗಂಟೆಯಿಂದ ಮತ ಎಣಿಕೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------