

ಹಿರಿಯೂರು: ತಾಲೂಕಿನ ಖಂಡೇನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಸಾವಿತ್ರಮ್ಮ ಈಶ್ವರಪ್ಪ, ಉಪಾಧ್ಯಕ್ಷರಾಗಿ ಕೆ.ಟಿ.ಶ್ರೀನಿವಾಸ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಹನುಮಂತಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಬಾಲಸುಬ್ರಹ್ಮಣ್ಯ, ಸದಸ್ಯರಾದ ಶಿವಮ್ಮ, ಮಂಗಳಾ ಯೋಗೇಶ್, ಸೌಮ್ಯಾ, ರಾಘವೇಂದ್ರ, ರಘು ಇತರರಿದ್ದರು.
*ಧರ್ಮಪುರ: ಗ್ರಾಪಂ ಅಧ್ಯಕ್ಷೆಯಾಗಿ ಜ್ಯೋತಿ ಹನುಮಂತರಾಯಪ್ಪ, ಉಪಾಧ್ಯಕ್ಷೆಯಾಗಿ ಲಕ್ಷ್ಮೀದೇವಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
*ಹರಿಯಬ್ಬೆ: ಗ್ರಾಪಂ ಅಧ್ಯಕ್ಷೆಯಾಗಿ ಶಶಿಕಲಾ ಹನುಮಂತರಾಯ, ಉಪಾಧ್ಯಕ್ಷೆಯಾಗಿ ಧನಲಕ್ಷ್ಮೀ ಅವಿರೋಧ ಆಯ್ಕೆಯಾದರು.