

ಕೋಟ: ಕೋಟ ವಿವೇಕ ವಿದ್ಯಾಸಂಸ್ಥೆಗಳ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು.
ಕಾಲೇಜು ವಿಭಾಗದಿಂದ ಹತ್ತು ಹಾಗೂ ಹೈಸ್ಕೂಲ್ ವಿಭಾಗದಿಂದ ಮೂರು ಜನ ಅಭ್ಯರ್ಥಿಗಳು ಭಾಗವಹಿಸಿದ್ದರು. ಚುನಾವಣಾ ಪ್ರಕ್ರಿಯೆ ಮೊಬೈಲ್ ಇವಿಎಂ ಆ್ಯಪ್ ಮೂಲಕ ನಡೆಸಲಾಯಿತು. ಕಾಲೇಜು ವಿಭಾಗದಿಂದ ಸುಶಾನ್ ಶೆಟ್ಟಿ ನಾಯಕನಾಗಿ, ಪ್ರೌಢಶಾಲಾ ವಿಭಾಗದಿಂದ ಸಮೃದ್ಧ ಜೀವನ್ ಉಪನಾಕಯನಾಗಿ ಆಯ್ಕೆಯಾದರು.
ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ಕಾರ್ಯ ನಿರ್ವಹಿಸಿದರು. ಪ್ರಾಂಶುಪಾಲ ಜಗದೀಶ ನಾವಡ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಪ್ರೇವಾನಂದ ಉಪಸ್ಥಿತರಿದ್ದರು. ಗಣೇಶ್ ಕುವಾರ್ ಶೆಟ್ಟಿ, ರತಿ ಸಹಕರಿಸಿದರು. ಸಂಜೀವ ಜಿ. ವಂದಿಸಿದರು.