

ಶಿವಮೊಗ್ಗ: ಜೀವ ವೈವಿದ್ಯತೆಯ ತಾಣ ಪಶ್ಚಿಮಘಟ್ಟದ ಹಲವಾರು ಜೀವಿಗಳು ಮತ್ತು ಪ್ರಭೇದಗಳು ಅಳಿವಿನಂಚಿಗೆ ಬಂದಿವೆ. ಅಳಿದುಳಿದ ಜೀವರಾಶಿಗಳು ಮತ್ತು ಪ್ರಭೇದಗಳನ್ನು ಉಳಿಸಿಕೊಳ್ಳುವ ಸವಾಲು ನಮ್ಮೆಲ್ಲರ ಮುಂದಿವೆ. ಅದರಲ್ಲೂ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಪರಿಸರಕ್ಕಾಗಿ ನಾವು ಶಿವಮೊಗ್ಗ ಜಿಲ್ಲಾ ಘಟಕದಿಂದ ಬಹಿರಂಗ ಪತ್ರವನ್ನು ತಲುಪಿಸುವುದಾಗಿ ಘಟಕದ ಸದಸ್ಯ, ಪರಿಸರಾಸಕ್ತ ಡಾ. ಎಲ್.ಕೆ.ಶ್ರೀಪತಿ ತಿಳಿಸಿದರು.
ಚುನಾವಣೆ ವೇಳೆ ಬರೀ ಅಭಿವೃದ್ಧಿ, ಪರಸ್ಪರ ಟೀಕೆ, ಆರೋಪ-ಪ್ರತ್ಯಾರೋಪ ಮಾಡುವುದರಲ್ಲೇ ಕಾಲಹರಣ ಮಾಡಲಾಗುತ್ತಿದೆ. ಚುನಾವಣೆ ಎನ್ನುವುದು ಅಷ್ಟಕ್ಕೆ ಸೀಮಿತವಾಗಿದೆ. ಇಲ್ಲಿನ ನೀರು, ಗಾಳಿ, ಅರಣ್ಯ, ಪರಿಸರ ಸಂರಕ್ಷಣೆಗೆ ಯಾರೋಬ್ಬರೂ ಒತ್ತು ನೀಡುತ್ತಿಲ್ಲ. ಹಾಗಾಗಿ ಪರಿಸರಾಸಕ್ತರ ತಂಡವು ಲೋಕಸಭಾ ಅಭ್ಯರ್ಥಿಗಳಿಗೆ 12 ಅಂಶಗಳ ಬಹಿರಂಗ ಪತ್ರವನ್ನು ಸಿದ್ಧಪಡಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿದೆ. ಪ್ರಸ್ತುತ ಜಿಲ್ಲೆಯ ಸಮಸ್ಯೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಎಲ್ಲ ಜೀವರಾಶಿಗಳಿಗೂ ಅತ್ಯಗತ್ಯವಾದ ಜೀವಜಲದ ಕೊರತೆಯಾಗುತ್ತಿರುವುದು ಮತ್ತು ವರ್ಷದಿಂದ ವರ್ಷಕ್ಕೆ ಉಷ್ಣತೆ ಏರಿಕೆ ಆಗುತ್ತಿರುವುದು ಗೋಚರಿಸುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮಲೆನಾಡು ಪ್ರಾಕೃತಿಕ ವಿಕೋಪಗಳಿಂದ, ರೋಗ ರುಜಿನಗಳಿಂದ ವಿಷಮಯ ತಾಣವಾಗಿ ಬದಕಲಸಾಧ್ಯ ಆಗುವುದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ. ಆ ಕಾರಣಕ್ಕೆ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಮನವಿ ಮಾಡಿದರು. ಘಟಕದ ಸದಸ್ಯರಾದ ಪ್ರೊ. ಬಿ.ಎಂ.ಕುಮಾರಸ್ವಾಮಿ, ರಮೇಶ್ ಹೆಗಡೆ, ಎಂ.ಶಂಕರ್, ಜಿ.ಎಲ್.ಜನಾರ್ಧನ್, ಎಸ್.ಪಿ.ಅಶೋಕ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಬಹಿರಂಗ ಪತ್ರದಲ್ಲಿ ಏನಿದೆ ?