

ಬಾದಾಮಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಮುಖ ಪಾತ್ರ ವಹಿಸುತ್ತಾನೆ. ಇಂದಿನ ಮಕ್ಕಳೇ ನಾಳಿನ ಮತದಾರರು, ಅವರಿಗೆಲ್ಲ ಶಾಲೆಯಲ್ಲಿ ಮತದಾನದ ಪ್ರಕ್ರಿಯೆ ಪರಿಚಯಿಸಿ ಕೊಡುವುದು ತುಂಬ ಅಗತ್ಯ ಎಂದು ಶಿಕ್ಷಕ ಬಸವರಾಜ ಚಿಕ್ಕಣ್ಣವರ ಹೇಳಿದರು.
ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸತ್ತಿನ ಚುನಾವಣೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಚುನಾವಣೆ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು. ಬ್ಯಾಲೆಟ್ ಪೇಪರ್ ಸಿದ್ಧಪಡಿಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು. ವಿಶೇಷವಾಗಿ ಬಾಲಕಿಯರಿಗಾಗಿ ಒಂದು ಪಿಂಕ್ ಬೂತ್ ಹಾಗೂ ಬಾಲಕರಿಗಾಗಿ ಏಳು ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಚುನಾವಣೆ ಸಿಬ್ಬಂದಿಯಾಗಿ ಮಕ್ಕಳೇ ಕಾರ್ಯ ನಿರ್ವಹಿಸಿದರು.
ಪ್ರಭಾರಿ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ ಮಾತನಾಡಿದರು. ಸಹಶಿಕ್ಷಕರಾದ ರಮೇಶ ಹಂಜಿ, ಭಾಗ್ಯಲಕ್ಷ್ಮಿ ಟಿ.ಎಚ್. ರೇಣುಕಾ ಶಿಸ್ತಗಾರ, ಕೀರ್ತಿ ಬಡಿಗೇರ, ಕಾವ್ಯಾ ಪಾಟೀಲ, ರಂಗನಾಥ ಈಳಗೇರ, ಶ್ರೀನಿವಾಸ ಈಳಗೇರ, ಎಸ್.ಬಿ.ಮುದೇನಗುಡಿ, ಹನುಮಂತ ಬಿ., ಅಶೋಕ ಪೂಜಾರಿ, ದುರ್ಗಾ ಎಂ., ಕೇಶವ ರಘುವೀರ, ಸಂಗಮೇಶ ಉಳ್ಳಾಗಡ್ಡಿ, ರೂಪಾ ಎಸ್., ಬಸವರಾಜ ಸಿಂದಗಿಮಠ ಇದ್ದರು.