ವಕೀಲರ ಸಂಘಕ್ಕೆ ಆಯ್ಕೆ

ADVCATE
ಸಿಂಧನೂರು ತಾಲೂಕು ವಕೀಲರ ಸಂಘದ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ ಎನ್.ರಾಮನಗೌಡ, ಖಜಾಂಚಿ ಶರಣಪ್ಪ ಉಮಲೂಟಿ ಅವರನ್ನು ಅಭಿನಂದಿಸಲಾಯಿತು. ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಯಪ್ಪ ವಕೀಲ, ಈರೇಶ ಇಲ್ಲೂರು, ಲಕ್ಷ್ಮಣ ಕುರುಕುಂದ, ಜಡಿಯಪ್ಪ, ಬಸವರಾಜ ಇದ್ದರು.
Published on

ಸಿಂಧನೂರು: ತಾಲೂಕು ವಕೀಲರ ಸಂಘದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್.ರಾಮನಗೌಡ, ಖಜಾಂಚಿಯಾಗಿ ಶರಣಪ್ಪ ಉಮಲೂಟಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಭೀಮನಗೌಡ, ಎನ್.ರಾಮನಗೌಡ ಹಾಗೂ ನಾಲ್ವರು ಖಜಾಂಚಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಮತದಾನ ಬಳಿಕ ಏಣಿಕೆ ಪ್ರಕ್ರಿಯೆಯಲ್ಲಿ ಕೆ.ಭೀಮನಗೌಡ 195 ಮತ, ಎನ್.ರಾಮನಗೌಡ 198 ಮತ ಪಡೆದರು. ಒಟ್ಟು 394 ಮತ ಚಲಾವಣೆಯಾಗಿ, ಒಂದು ಮತ ತಿರಸ್ಕೃತಗೊಂಡಿತು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣ 22 ಮತ, ನಾಗರಾಜ ಎಂ.127 ಮತ, ಸೈಯ್ಯದ್ ಜಮೀಲ್ 96 ಮತ, ಶರಣಪ್ಪ ಉಮಲೂಟಿ 148 ಮತ ಪಡೆದರು. 394 ಮತ ಚಲಾವಣೆಯಾಗಿ, ಒಂದು ತಿರಸ್ಕೃತಗೊಂಡಿದೆ. ಚುನಾವಣಾಧಿಕಾರಿಗಳಾದ ಕೆ.ಅಮರೇಗೌಡ ವಕೀಲ ಹಾಗೂ ಸಹಾಯಕ ಚುನಾವಣಾಧಿಕಾರಿ ಉರುಕುಂದಪ್ಪ ವಕೀಲ ಅವರು ಹೊಸ ಪದಾಧಿಕಾರಿಗಳನ್ನು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net