ಮತದಾರರ ಗೆದ್ದರೆ ಚುನಾವಣೆ ಗೆಲುವು ಸುಲಭ

bjp obc morcha sabhe
ಬಿಜೆಪಿ ಕಚೇರಿಯಲ್ಲಿ ಒಬಿಸಿ ಮೋರ್ಚಾ ಸಭೆಯನ್ನು ಜಿಲ್ಲಾಧ್ಯಕ್ಷ ಎಂ.ಎನ್.ಸುಧಾಕರ್ ಉದ್ಘಾಟಿಸಿದರು. ಮಂಜುನಾಥ್, ವಿ.ಕದಿರೇಶ್, ರಾಜಶೇಖರ್ ಗಾಳಿಪುರ, ಕುಬೇರಪ್ಪ, ಕೆ.ಎಸ್.ಪ್ರಶಾಂತ್, ಕೆ.ಲಕ್ಷ್ಮಣ್, ಪ್ರದೀಪ್ ಹೊನ್ನಪ್ಪ, ರೂಪಾ ಇದ್ದರು.
Published on

ಶಿವಮೊಗ್ಗ: ಸಮಾಜದಲ್ಲಿ ಶೇ.60ಕ್ಕಿಂತ ಅಧಿಕ ಹಿಂದುಳಿದ ವರ್ಗಗಳ ಮತದಾರರಿದ್ದು ಅವರೆಲ್ಲರನ್ನೂ ಸಂಘಟಿಸಿ ಮನವೊಲಿಸಿದರೆ ಲೋಕಸಭಾ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಎಂದು ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ಎಂ.ಎನ್.ಸುಧಾಕರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಮೋರ್ಚಾ ಸಭೆ ಉದ್ಘಾಟಿಸಿ ಮಾತನಾಡಿ, ಮಂಡಲದ ಮಹಾಶಕ್ತಿ ಕೇಂದ್ರಗಳ ಮೂಲಕ ಕೇಂದ್ರ ಸರ್ಕಾರ, ಹಿಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತು ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಕಾರ್ಯಗಳನ್ನು ಜನರಿಗೆ ಮುಟ್ಟಿಸಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಾಲತೇಶ್, ಪ್ರಮುಖರಾದ ಮಂಜುನಾಥ್, ವಿ.ಕದಿರೇಶ್, ರಾಜಶೇಖರ್ ಗಾಳಿಪುರ, ಕುಬೇರಪ್ಪ, ಕೆ.ಎಸ್.ಪ್ರಶಾಂತ್, ಕೆ.ಲಕ್ಷ್ಮಣ್, ಪ್ರದೀಪ್ ಹೊನ್ನಪ್ಪ, ಕೆ.ಎನ್.ವಿಕಾಸ್, ರೂಪಾ ಮಾಲತೇಶ್, ಎಂ.ಪ್ರಭಾಕರ್, ರಂಗನಾಥ್, ಓಂ ಗಣೇಶ್, ಕೆ.ಟಿ.ಶ್ರೀನಿವಾಸ್, ರಾಘವೇಂದ್ರ, ರೇಖಾ ರವಿ, ವಿದ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net