

ಲಕ್ಷ್ಮೇಶ್ವರ: ಕೋವಿಡ್ ಸೇರಿ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆಯಲ್ಲಿ ಔಷಧ ವ್ಯಾಪಾರಸ್ಥರು ನೀಡುವ ಸೇವೆಯನ್ನು ಸಮಾಜ ಎಂದಿಗೂ ಸ್ಮರಿಸುತ್ತದೆ ಎಂದು ಗದಗ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ಬಿ. ದಾನಪ್ಪಗೌಡ್ರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ನೂತನ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಔಷಧ ವ್ಯಾಪಾರಸ್ಥರು ಲಾಭದ ಜತೆ ಸೇವಾಮನೋಭಾವ ಹೊಂದಿರುತ್ತಾರೆ. ಔಷಧ ವ್ಯಾಪಾರಸ್ಥರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಂಘಟಿತರಾಗಬೇಕು ಎಂದರು.
ಸಂಘದ ಅಧ್ಯಕ್ಷರಾಗಿ ಚಂದ್ರಶೇಖರಗೌಡ ಪಾಟೀಲ, ಉಪಾಧ್ಯಕ್ಷರಾಗಿ ಶ್ರೀಕಾಂತ ಕೊಪ್ಪದ, ಜೀನದತ್ತ ಹೆರೆಗೌಡ್ರ, ವಿನಾಯಕ ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಆನಂದ ಓದು, ಸಹ ಕಾರ್ಯದರ್ಶಿ ರೇಖಾ ಪಾಟೀಲ, ರಾಘವೇಂದ್ರ ಕಮ್ಮಾರ, ಖಜಾಂಚಿ ಮಲ್ಲಿಕಾರ್ಜುನ ದಡ್ಡೂರ ಆಯ್ಕೆಯಾದರು. ಜಿಲ್ಲಾ ಖಜಾಂಚಿ ಪ್ರಭು ಕಾಬಳ್ಳಿ, ಇತರರಿದ್ದರು.