

ಪಾವಗಡ: ತಾಲೂಕಿನ ವಕೀಲರ ಸಂಘಕ್ಕೆ ಬುಧುವಾರ ಆಯೋಜಿಸಿದ್ದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಆರ್.ರಂಗನಾಥಪ್ಪ, ಎಚ್.ರಾಮಾಂಜನೇಯಲು, ಪಿ.ಎಂ.ರಾಜಶೇಖರ್, ವಿ.ಡಿ. ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಸ್.ರಘುನಂದನ್, ಎಚ್.ಹನುಮಂತರಾಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ, ಎಚ್.ಚಂದ್ರಪ್ಪ, ಎಲ್.ಇ.ನಾಗರಾಜು, ಎನ್.ರವೀಂದ್ರಪ್ಪ ನಾಮಪತ್ರ ಸಲ್ಲಿಸಿದ್ದರು.
62 ಮತ ಪಡೆದು ಆರ್.ರಂಗನಾಥಪ್ಪ ಅಧ್ಯಕ್ಷರಾಗಿ, 74 ಮತಗಳನ್ನು ಪಡೆದು ಸಿ.ಎಚ್.ಹನುಮಂತ ರಾಯಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ 81 ಮತಗಳನ್ನು ಪಡೆದು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಚಂದ್ರಪ್ಪ ಆಯ್ಕೆಯಾದರು. ಎಸ್.ಎನ್.ಮುರಳಿಧರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.