

ಮೈಸೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್(ಐಡಿಎ) ಮೈಸೂರು ಶಾಖೆಯ 2025ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಾ. ಎನ್.ಆರ್.ಪ್ರಮೋದ್, ಕಾರ್ಯದರ್ಶಿಯಾಗಿ ಡಾ.ಟಿ.ಕೆ.ಸಂದೀಪ್, ಖಜಾಂಚಿಯಾಗಿ ಡಾ.ಎನ್.ರಘುನಾಥ್, ಉಪಾಧ್ಯಕ್ಷರಾಗಿ ಡಾ. ಅಬ್ರಹಾಂ ಥಾಮಸ್, ಡಾ.ಸಿ.ಕೆ.ಸೆಂದಿಲ್, ಡಾ. ಪ್ರತಾಪ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಡಾ. ಎಸ್.ಬಾಲಾಜಿ ಸಿಂಗ್, ಸಹಾಯಕ ಕಾರ್ಯದರ್ಶಿಯಾಗಿ ಡಾ. ನಾಗಶ್ರೀ, ಸಿಡಿಎಚ್ ಸಂಚಾಲಕರಾಗಿ ಡಾ. ಬೃಂದಾ ಸುಹಾಸ್ ಗೋಧಿ, ಸಿಡಿ ಸಂಚಾಲಕರಾಗಿ ಡಾ. ರವಿಕಿರಣ್, ಸಂಪಾದಕರಾಗಿ ಡಾ. ಎಸ್.ಮೀನಾಕ್ಷಿ , ರಾಜ್ಯ ಶಾಖೆಯ ಪ್ರತಿನಿಧಿಯಾಗಿ ಡಾ. ಕೆ.ಪಿ.ಮಹೇಶ್, ಡಾ.ಬಿ.ನಂದಲಾಲ್ ಆಯ್ಕೆಯಾದರು.
ಕಾರ್ಯನಿರ್ವಹಣಾ ಸಮಿತಿ ಸದಸ್ಯರಾಗಿ ಡಾ. ನಿತಿನ್ ವಿ. ಮುರಳೀಧರ್, ಡಾ.ಸತ್ಯಪ್ರಕಾಶ್, ಡಾ.ಪ್ರಸನ್ನ ದೇಶಪಾಂಡೆ, ಡಾ. ರಾಘವೇಂದ್ರ ಸ್ವಾಮಿ, ಡಾ.ಎಸ್.ಪಿ.ಪೂರ್ಣಿಮಾ , ಡಾ.ಮೀನಾಕುಮಾರಿ, ಡಾ.ನವೀನ್ ಕುಮಾರ್, ಡಾ.ಎ.ಬಿ.ಶುಭಾ, ಡಾ. ಜಿ.ಎಸ್. ಜಯಪ್ರಕಾಶ್, ಡಾ.ಎಚ್.ಎಸ್. ಚರಣ್‌ಬಾಬು, ಡಾ.ಸಿ.ಹರೀಶ್, ಡಾ. ಕೀರ್ತಿ ವಿಜಿ, ಡಾ.ಎಚ್.ಎಲ್.ಮುತ್ತುರಾಜ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.