

ಕೊಳ್ಳೇಗಾಲ: ರಾಜ್ಯ ಸರ್ಕಾರಿ ನೌಕರರ ಸಂಘದ ಕೊಳ್ಳೇಗಾಲ ತಾಲೂಕು ಘಟಕಕ್ಕೆ 8 ನಿರ್ದೇಶಕರು ಚುನಾಯಿತರಾದರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಜರುಗಿದ ಸಂಘದ ಚುನಾವಣೆಯಲ್ಲಿ 8 ಜನರ ನಿರ್ದೇಶಕರು ಆಯ್ಕೆಗೊಂಡಿದ್ದು, 24 ಜನರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸುಂದ್ರಮ್ಮ ಘೋಷಿಸಿದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಂ.ಪ್ರಕಾಶ್ , ಚಂದ್ರಶೇಖರ್, ಎಂ.ಸತೀಶ್ ಹಾಗೂ ಆರೋಗ್ಯ ಇಲಾಖೆ ವಿಭಾಗ ಜಿ.ಅಭಿಲಾಶ್, ಎಂ. ಕುಮಾರ್, ಲೋಕೇಶ್ ಹಾಗೂ ಪ್ರೌಢಶಾಲಾ ವಿಭಾಗದಿಂದ ಎಂ.ಚಿಕ್ಕರಾಜು, ಎಲ್. ಹರೀಶ್, ಮತಗಳನ್ನು ಗಳಿಸುವ ಮೂಲಕ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಅವಿರೋಧ ಆಯ್ಕೆ: ಕೃಷಿ ಇಲಾಖೆಯ ನಾಗೇಂದ್ರ, ಪಶುಪಾಲನೆ ಇಲಾಖೆಯ ಸಿ.ರುಕ್ಮಾಂಗದ, ಕಂದಾಯ ಇಲಾಖೆಯ ಸಿ.ಸುಶೀಲ್ ಕುಮಾರ್, ಸಿ.ಕುಮಾರ್, ಲೋಕೋಪಯೋಗಿ ಇಲಾಖೆಯ ಕೆ.ರಾಜು, ಪಂಚಾಯತ್ ರಾಜ್ ಇಲಾಖೆಯ ಎ. ಸಿದ್ದರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯ ಬಿ.ಎನ್.ದಿವಾಕರ, ಸರ್ಕಾರಿ ಪ.ಪೂ. ಶಿಕ್ಷಣ ಇಲಾಖೆಯ ಜೋಸೆಫ್ ರ.ಅಲೆಕ್ಸಾಂಡರ್, ಎಂ.ಮಾದೇಶ್, ಸಮಾಜ ಕಲ್ಯಾಣ ಇಲಾಖೆಯ ಎಂ.ಎನ್.ವಸಂತಕುಮಾರ್, ಅರಣ್ಯ ಇಲಾಖೆಯ ಎಂ.ಆನಂದ ಅರುಳ್ ರಾಜ್, ಟಿಎಚ್‌ಒ ಕಚೇರಿಯ ಸಿ. ವೆಂಕಟೇಶ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಿ.ವರದರಾಜು, ಖಜಾನೆ ಇಲಾಖೆಯ ಸುಂದರರಾಣಿ, ಭೂ ಮಾಪನ ಇಲಾಖೆಯ ವೀರೇಶ್, ನ್ಯಾಯಾಂಗ ಇಲಾಖೆಯ ಎಂ.ಬಿ.ನಂಜುಂಡಪ್ಪ , ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಮಾಗಳಿ, ಎಂ.ಶಿವ ಮಾದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿ.ನಂಜಮ್ಮಣಿ, ಕೃಷಿ ಮಾರುಕಟ್ಟೆ ಇಲಾಖೆಯ ಎಂ. ನವೀನ್ ಕುಮಾರ್, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಎಂ.ರಮೇಶ, ಸಹಕಾರ ಸಂಘ ಲೆಕ್ಕಪರಿಶೋಧನ ಇಲಾಖೆಯ ವಿ.ಶೈಲೇಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸುಂದ್ರಮ್ಮ, ಸಹಾಯಕ ಚುನಾವ ಣಾಧಿಕಾರಿ ವಿನ್ಸೆಂಟ್ ಅವರು ವಹಿಸಿದ್ದರು. ಮತ ಎಣಿಕೆ ವೇಳೆ ಪಟ್ಟಣ ಪೊಲೀಸರು ಭದ್ರತೆ ಒದಗಿಸಿದ್ದರು.