ಛಲವಾದಿ ಮಹಾಸಭಾಕ್ಕೆ ಚುನಾವಣೆ

CTD 22 CHALVADI MHASABA
Published on

ಚಿತ್ರದುರ್ಗ: ಛಲವಾದಿ ಮಹಾಸಭಾದ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಸಮಿತಿ ಅಧ್ಯಕ್ಷರ ಆಯ್ಕೆಗಾಗಿ ಅಕ್ಟೋಬರ್ 31ರಂದು ನಗರದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು.

ಛಲವಾದಿ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸಮುದಾಯ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಸಮಿತಿಗಳಿಗೆ ಅಧ್ಯಕ್ಷರ ನೇಮಿಸಬೇಕಿದೆ. ಅಧ್ಯಕ್ಷ ಸ್ಥಾನಕ್ಕೆ ಅ.26ರಂದು ನಾಮಪತ್ರ ಸಲ್ಲಿಸಿ ಅಂದೇ ವಾಪಸು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಮುದಾಯದ ಏಳಿಗೆಗೆ ಛಲವಾದಿ ಗುರುಪೀಠ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಸಮುದಾಯ ಭವನ ನಿರ್ಮಿಸಬೇಕಿದೆ. ಮಠವನ್ನು ಕಟ್ಟಬೇಕಿದೆ ಎಂದ ಶ್ರೀಗಳು, ನಮ್ಮ ಪಟ್ಟಾಧಿಕಾರವಾಗಿ 25 ವರ್ಷಗಳಾಗಿವೆ ಎಂದು ಹೇಳಿದರು.

ಮುಖಂಡ ಅಣ್ಣಪ್ಪಸ್ವಾಮಿ ಮಾತನಾಡಿ, 2009ರಲ್ಲಿ ಜಿಲ್ಲಾ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷನಾಗಿದ್ದಾಗ ಭರಮಸಾಗರ, ತುರುವನೂರು, ಹಿರೇಗುಂಟನೂರು ಹೋಬಳಿ ಮಟ್ಟದ ಸಮಾವೇಶ ನಡೆಸಿದ್ದನ್ನು ಸ್ಮರಿಸಿದರು.

ಸಮುದಾಯರ ಜನರು ಸಂಘಟಿತರಾಗಿ ಸ ರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ. ಹಾಸ್ಟೆಲ್, ಶಾಲೆ, ಸಮುದಾಯ ಭವನಕ್ಕೆ ಅನುದಾನ ಪಡೆಯಬೇಕಿದ್ದು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದರು.

ಮುಖಂಡ ರಾಮಚಂದ್ರಪ್ಪ ಮಾತನಾಡಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ಸಮುದಾಯ ಸಂಘಟನೆ, ಶಿಕ್ಷಣ, ಹೋರಾಟದ ಮೂಲಕ ಬೆಳೆಯಬೇಕು ಎಂದರು.

ಮಹಾಸಭಾದ ರಾಜ್ಯ ಜಂಟಿ ಕಾರ‌್ಯದರ್ಶಿ ಟಿ.ಆರ್.ನಾಗೇಶ್, ಶೇಷಣ್ಣ, ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net