ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

2 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನೂತನವಾಗಿ ರಚನೆಯಾಗಿರುವ ದೇವರಹುಬ್ಬಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಿರಿಯ ಸಹಕಾರಿ ಮಹಾದೇವಪ್ಪ ಚೆನ್ನಬಸಪ್ಪ ನೀರಲಗಿ ಅಧ್ಯಕ್ಷರಾಗಿ ಮತ್ತು ಮಂಜನಾಥ ಮುದಕವಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾಗಿ ರಮೇಶ ಕೋರಿ, ಅರ್ಜುನಗೌಡ ಪಾಟೀಲ, ಪರಮೇಶ್ವರ ಕಲಕೇರಿ, ಈಶ್ವರಗೌಡ ಪಾಟೀಲ, ಜಗದೀಶ ಬಡಿಗೇರ, ಸಂಗಪ್ಪ ಬಳಿಗೇರ, ರಾಜು ಹರಿಜನ ಪರಿಶಿಷ್ಟ ಜಾತಿ, ಗೋಪಾಲ ತಳವಾರ ಪರಿಶಿಷ್ಟ ಪಂಗಡ, ಮಹಿಳಾ ಮೀಸಲು ವಿಭಾಗದಿಂದ ಲಕ್ಷ್ಮೀಬಾಯಿ ಕದಂ ಮತ್ತು ಅಶ್ವಿನಿ ಅಸುಂಡಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪಿ. ಮಧಸೂಧನ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net