ಸುದೀರ್ಘ ಅವಧಿಯ ಚುನಾವಣೆ ಪ್ರಕ್ರಿಯೆ; ಆಯೋಗ ಮುಖ್ಯಸ್ಥರು, ಪ್ರಧಾನಿ ಉತ್ತರಕ್ಕೆ ವೀರಪ್ಪ ಮೊಯ್ಲಿ ಒತ್ತಾಯ

IMG-20240421-WA0197(2)
Published on

ಮಂಗಳೂರು: ಹಿಂದೆ ಚುನಾವಣೆಗಳು ಗರಿಷ್ಠ 20 ದಿನಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ ಈ ಬಾರಿ ಲೋಕಸಭಾ ಚುನಾವಣೆ ಪ್ರಕ್ರಿಯೆ 60 ದಿನ ಅಧಿಕ ತೆಗೆದುಕೊಳ್ಳುತ್ತಿದೆ. ತಂತ್ರಜ್ಞಾನ ಅತ್ಯಂತ ಮುಂದುವರಿದಿರುವ ಈ ಕಾಲದಲ್ಲಿ ಚುನಾವಣೆ ಪ್ರಕ್ರಿಯೆ ಯಾಕೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥರು, ಪ್ರಧಾನಿ ಉತ್ತರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಒತ್ತಾಯಿಸಿದ್ದಾರೆ.
ಈ ರೀತಿಯ ಚುನಾವಣೆ ಅಕ್ರಮಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಅವರು ನಗರದಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಸಂದೇಹ ವ್ಯಕ್ತಪಡಿಸಿದರು
‘ಒಂದು ಚುನಾವಣೆ ಒಂದು ದೇಶ’ ಎಂದು ಬಿಜೆಪಿ ಘೋಷಿಸಿದೆ. ಈ ರೀತಿಯ ಚುನಾವಣೆಗೆ ಒಂದು ವರ್ಷ ಬೇಕಾಗಬಹುದು. ಇದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಏಕಚಕ್ರಾಧಿಪತ್ಯ ಸ್ಥಾಪನೆ ಮಾಡುವ ಹುನ್ನಾರ ಇದರಲ್ಲಿದೆ. ಸಂವಿಧಾನದ ಆಶಯವನ್ನು ಸೆದೆಬಡಿಯುವ ಕಾರ್ಯ ಮುಂದೆ ಆಗಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ದಕ್ಷಿಣ ಕನ್ನಡ ಉಸ್ತುವಾರಿ ಜಾನ್ ಕೆನನ್, ಮುಖಂಡರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಅಶ್ವನಿ, ಭಾಸ್ಕರ ಮೊಯ್ಲಿ, ಮಹಾಬಲ ಮಾರ್ಲ, ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net