

ಅರಕೇರಾ: ತಾಲೂಕಿನ ಗಲಗ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆಗೆ ಗುರುವಾರ ಚುನಾವಣೆ ನಡೆಯಿತು.
ಇದನ್ನೂ ಓದಿ: ಕೇತುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಸತ್ ಚುನಾವಣೆ
ಒಟ್ಟು 13 ವಿದ್ಯಾರ್ಥಿಗಳು ಸ್ಪರ್ಧಿಸಿದರು. ಶಾಲಾ ಚುನಾವಣಾ ಸಾಕ್ಷರತಾ ಸಮಿತಿ ನೋಡಲ್ ಹಾಗೂ ಕಾರ್ಯದರ್ಶಿಯಾಗಿ ಶಿಕ್ಷಕ ವೆಂಕಟೇಶ ನೇತೃತ್ವವಹಿಸಿದ್ದರು. ಮತಗಟ್ಟೆ ಅಧಿಕಾರಿಗಳಾಗಿ ವಿಠಲ, ತಿಮ್ಮವ್ವ ನಿರ್ವಹಿಸಿದರು. ನಂತರ ನೂತನ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಮುಖ್ಯ ಶಿಕ್ಷಕ ಬಸವರಾಜ ಕಟ್ಟಿಮನಿ ಬೋಧಿಸಿದರು.
ಶಿಕ್ಷಕ ಭೀಮೋಜಿರಾವ್ ಜಗತಾಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಹತ್ವ ಮತ್ತು ಆಯ್ಕೆಯಾದ ಜನಪ್ರತಿನಿಧಿಗಳಿಗೆ ಇರುವ ಜವಬ್ದಾರಿ ಮಹತ್ವ ಶಾಲಾ ಸಂಸತ್ತಿನಿಂದ ತಿಳಿಯಬಹುದು. ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ಪ್ರತಿನಿಧಿಗಳಿಗೆ ತಿಳಿಸಬಹುದು ಎಂದರು.
ವಿದ್ಯಾರ್ಥಿಗಳಾದ ರಮೇಶ ಗ್ವಾಲಯ್ಯ, ರವಿಕುಮಾರ ಬಸವರಾಜ, ಸುರೇಶ ಶಿವರಾಜ, ಕಾವೇರಿ ಹುಸೇನಪ್ಪ, ಲಕ್ಷೀ ಈರಣ್ಣ, ಚೈತ್ರಾ ಚಂದಣ್ಣ, ಮರಿಯಮ್ಮ ರಮೇಶ, ಮಮತಾ ಬಸವರಾಜ, ವಿನೋದ್ ಕುಮಾರ ಸಂಗಣ್ಣ, ರಮೇಶ ಚನ್ನಪ್ಪ ಖಾಜಾ ಬಂದೇನವಾಜ್ ಮೈನುದ್ದಿನ್ ಶಾಲಾ ಸಂಸತ್ತು ಚುನಾವಣೆಗೆ ಆಯ್ಕೆಯಾದರು. ಶಿಕ್ಷಕರಾದ ಕೌಸರ ಜಬೀನ, ಕಾರ್ತಿವೀರ, ಗೌರವ ಶಿಕ್ಷಕರಾದ ರಾಜು ಮೂಕಯ್ಯ, ಆರೋಗ್ಯಪ್ಪ, ಅಶ್ವಿನಿ ಇದ್ದರು.